ಬೆಂಗಳೂರು (ಮೇ. 22): ಮೇ 12 ರ ಸಂಜೆ ಕಾಂಗ್ರೆಸ್ ಹೈಕಮಾಂಡ್‌ಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕಷ್ಟ ಎಂಬ ಅಂದಾಜು ಬಂದಿತ್ತಂತೆ. ಹೀಗಾಗಿ ಸೋನಿಯಾ ಜೊತೆ ಮಾತನಾಡಿದ್ದ ರಾಹುಲ್ ಗಾಂಧಿ ಅವರು ಗುಲಾಂ ನಬಿ ಆಜಾದ್ ಮತ್ತು ಅಶೋಕ್ ಗೆಹ್ಲೋಟ್ ರನ್ನು ಬೆಂಗಳೂರಿಗೆ ಕಳುಹಿಸಿದ್ದರು.

15  ರ ಮಧ್ಯಾಹ್ನ ಅತಂತ್ರ  ವಿಧಾನಸಭೆ ಎಂದು ಗೊತ್ತಾಗುತ್ತಿದ್ದಂತೆ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿಗೆ ಕರೆ ಮಾಡಿದ ಗುಲಾಂ ನಬಿ ಆಜಾದ್, ಬೇಷರತ್ ಬೆಂಬಲ ಕೊಡ್ತೀವಿ ಎಂದು ಹೇಳಿದ ಅರ್ಧ ಗಂಟೆಯಲ್ಲಿ ಸೋನಿಯಾ ಗಾಂಧಿ ದೇವೇಗೌಡರ ಜೊತೆ ಮಾತನಾಡಿದರಂತೆ. ಸೋನಿಯಾ ಜೊತೆ ಮಾತುಕತೆ ನಂತರ ದೇವೇಗೌಡರು ಕುಮಾರಸ್ವಾಮಿ ಮತ್ತು ರೇವಣ್ಣ ಜೊತೆ ಮಾತನಾಡಿ ಸರ್ಕಾರ ರಚಿಸಲು ಓಕೆ ಅಂದರಂತೆ. ಈ ಮಧ್ಯೆ ದೆಹಲಿಯಿಂದ ಪಿಯೂಷ್ ಗೋಯಲ್ ಸೇರಿದಂತೆ ಅನೇಕರು ದೇವೇಗೌಡರ ಜೊತೆ ಮಾತನಾಡಲು ಪ್ರಯತ್ನಪಟ್ಟರೂ ಕೂಡ ದೇವೇಗೌಡರು ಲೈನ್‌ಗೆ ಕೂಡ ಬರಲು ಒಪ್ಪಲಿಲ್ಲವಂತೆ.