ಬೆಂಗಳೂರು [ಮೇ.10] :  ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಗುರುವಾರ ಸಂಜೆ 6ರ ಬಳಿಕ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ.  

ಸೋಶಿಯಲ್ ಮೀಡಿಯಾದಲ್ಲಿ, ವಿಶೇಷವಾಗಿ ವಾಟ್ಸಪ್, ಫೇಸ್ಬುಕ್‌ಗಳಂತಹ ಸಾಮಾಜಿಕ ಸಂಪರ್ಕ ಜಾಲತಾಣಗಳಲಲ್ಲಿ ಪ್ರಚಾರ ಮಾಡಬಹುದೇ ಎಂಬ ಬಗ್ಗೆ ಜಿಜ್ಞಾಸೆ ಹಲವರಲ್ಲಿ ಹುಟ್ಟಿಕೊಂಡಿದೆ.

ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್, ಮುಂತಾದ ಸೋಶಿಯಲ್ ಮೀಡಿಯಾಗಳನ್ನು ಕೂಡಾ ನಿಷೇಧದ ವ್ಯಾಪ್ತಿಗೆ ತರುವುದನ್ನು ಆಯೋಗ ಕೈಬಿಟ್ಟಿದೆ. ಆದರೆ ಅವುಗಳ ಬಗ್ಗೆ ನಿಗಾವಹಿಸುವುದಾಗಿ ಆಯೋಗ ಹೇಳಿದೆ.  ಅಭ್ಯರ್ಥಿಯ ಪರ ಸಾಮೂಹಿಕ ಸಂದೇಶಗಳನ್ನು ಕಳುಹಿಸುವುದರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. 

ನಿಷೇಧದ ಅವಧಿಯಲ್ಲಿ ಅಂತಹ ದೂರುಗಳು ಬಂದಲ್ಲಿ ಫಲಾನುಭವಿ ರಾಜಕೀಯ ಪಕ್ಷ ಹಾಗೂ ಅದರ ಅಭ್ಯರ್ಥಿಯ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.