ಮತದಾರರ ಪಟ್ಟಿಯಲ್ಲಿಲ್ಲ ಮಾಜಿ ಮುಖ್ಯಮಂತ್ರಿಯ ಹೆಸರು

SM Krishna Name Not Appear In Voter List
Highlights

ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇನ್ನು ಮೇ.೧೨ರಂದು ಚುನಾವಣೆ ನಡೆಯುತ್ತಿದ್ದು, ಮತದಾರರ ಪಟ್ಟಿ ಪರಿಶೀಲನೆ ಸೇರಿದಂತೆ ವಿವಿಧ ಕಾರ್ಯಗಳು ನಡೆಯುತ್ತಿದೆ. ಚುನಾವಣೆ ವೇಳೆ ಮತದಾರರ ಪಟ್ಟಿಯಲ್ಲಿ  ವಿವಿಧ ಲೋಪಗಳು ಅನೇಕ ಬಾರಿ ಕಂಡು ಬರುತ್ತದೆ. ಇದೀಗ ಚುನಾವಣೆ ವೇಳೆ ಪ್ರಮುಖ  ಅಚಾತುರ್ಯವೊಂದು ಬೆಳಕಿಗೆ ಬಂದಿದೆ.

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇನ್ನು ಮೇ.೧೨ರಂದು ಚುನಾವಣೆ ನಡೆಯುತ್ತಿದ್ದು, ಮತದಾರರ ಪಟ್ಟಿ ಪರಿಶೀಲನೆ ಸೇರಿದಂತೆ ವಿವಿಧ ಕಾರ್ಯಗಳು ನಡೆಯುತ್ತಿದೆ. 

ಚುನಾವಣೆ ವೇಳೆ ಮತದಾರರ ಪಟ್ಟಿಯಲ್ಲಿ  ವಿವಿಧ ಲೋಪಗಳು ಅನೇಕ ಬಾರಿ ಕಂಡು ಬರುತ್ತದೆ. ಇದೀಗ ಚುನಾವಣೆ ವೇಳೆ ಪ್ರಮುಖ  ಅಚಾತುರ್ಯವೊಂದು ಬೆಳಕಿಗೆ ಬಂದಿದೆ.

ಮತದಾರರ ಪಟ್ಟಿಯಲ್ಲಿ ಇದೀಗ ರಾಜ್ಯದ ಪ್ರಮುಖ ವ್ಯಕ್ತಿಯೋರ್ವರ ಹೆಸರನ್ನೇ ಎಆರ್ ಓ ಅಧಿಕಾರಿಗಳು ಕೈ ಬಿಟ್ಟಿದ್ದಾರೆ. 
ಮತದಾರರ ಪಟ್ಟಿಯಲ್ಲಿ ರಾಜ್ಯದ ಹೆಸರಾಂತ ಮಾಜಿ ಮುಖ್ಯಮಂತ್ರಿಯ  ಹೆಸರೇ ಇಲ್ಲವಾಗಿದೆ.

ಚುನಾವಣಾ ಅಧಿಕಾರಿಗಳು ಮತದಾರರ ಪಟ್ಟಿ ಪರಿಶೀಲನೆಯಲ್ಲಿ ತೊಡಗಿದ್ದು, ಕೊನೆಯ ಕ್ಷಣದವರೆಗೂ ಇಂತಹ ಕಾರ್ಯ ಕೈಗೊಳ್ಳಲಾಗುತ್ತದೆ. 

ಇದೀಗ ರಾಜ್ಯದ ಮತದಾರರ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಕೆಲ ದಿನಗಳ ಹಿಂದೆ ಕಾಂಗ್ರೆಸ್ ತೊರೆದ ಬಿಜೆಪಿ ಸೇರಿದ್ದ ಹಿರಿಯ ನಾಯಕ ಎಸ್.ಎಂ ಕೃಷ್ಣ  ಹೆಸರೆ ಇಲ್ಲವಾಗಿದೆ.

ಮತ್ತಿಕೆರೆ ನಿವಾಸಿಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಅವರ ಪತ್ನಿ ಹೆಸರನ್ನೇ ಚುನಾವಣಾ ಅಧಿಕಾರಿಗಳು ಕೈ ಬಿಟ್ಟಿದ್ದಾರೆ.

loader