ಚುನಾವಣೆಯಲ್ಲಿ ಹಣವಿಲ್ಲದೇ ಸೋತರಾ ಸಿದ್ದರಾಮಯ್ಯ?

First Published 22, May 2018, 4:44 PM IST
siddaramaiah faced Financial  crisis in Assembly Election 2018
Highlights

ಚುನಾವಣೆಯಲ್ಲಿ ಯಾವುದೇ ಮಂತ್ರಿ ತನು-ಮನ-ಧನ ಸಹಾಯ ಮಾಡಲಿಲ್ಲ, ಹೀಗಾಗಿ ಸೋತೆವು ಎಂದು ಸಿದ್ದರಾಮಯ್ಯ ದಿಲ್ಲಿ ನಾಯಕರ ಎದುರು ಹೇಳಿಕೊಂಡಿದ್ದಾರಂತೆ. ಎಂ.ಬಿ. ಪಾಟೀಲ್ ಹಾಗೂ ದೇಶಪಾಂಡೆ ಹೊರತುಪಡಿಸಿ ಹೆಚ್ಚಿನ ಮಂತ್ರಿಗಳು ತಮ್ಮ ಜಿಲ್ಲೆಗಳಲ್ಲಿಯೇ ಮುತುವರ್ಜಿಯಿಂದ ಓಡಾಡಲಿಲ್ಲ ಎಂದೂ ಹೇಳಿದ್ದಾರೆ ಎನ್ನಲಾಗಿದೆ.  


ಬೆಂಗಳೂರು (ಮೇ. 22): ಚುನಾವಣೆಯಲ್ಲಿ ಯಾವುದೇ ಮಂತ್ರಿ ತನು-ಮನ-ಧನ ಸಹಾಯ ಮಾಡಲಿಲ್ಲ, ಹೀಗಾಗಿ ಸೋತೆವು ಎಂದು ಸಿದ್ದರಾಮಯ್ಯ ದಿಲ್ಲಿ ನಾಯಕರ ಎದುರು ಹೇಳಿಕೊಂಡಿದ್ದಾರಂತೆ.

ಎಂ.ಬಿ. ಪಾಟೀಲ್  ಹಾಗೂ ದೇಶಪಾಂಡೆ ಹೊರತುಪಡಿಸಿ ಹೆಚ್ಚಿನ ಮಂತ್ರಿಗಳು ತಮ್ಮ ಜಿಲ್ಲೆಗಳಲ್ಲಿಯೇ ಮುತುವರ್ಜಿಯಿಂದ ಓಡಾಡಲಿಲ್ಲ ಎಂದೂ ಹೇಳಿದ್ದಾರೆ ಎನ್ನಲಾಗಿದೆ. ತಮ್ಮ ಆಪ್ತ ಎಚ್.ಸಿ. ಮಹದೇವಪ್ಪ ಕೂಡ ಚುನಾವಣೆ ಘೋಷಣೆ ಆದ ಮೇಲೆ ಜೊತೆಗೆ ನಿಲ್ಲಲಿಲ್ಲ. ಹೀಗಾಗಿ ಚಾಮುಂಡೇಶ್ವರಿ ಸೋತೆ. ಡಿ.ಕೆ. ಶಿವಕುಮಾರ್ ತಮ್ಮ ಬೆಂಬಲಿಗರ ಕ್ಷೇತ್ರಗಳಿಗೆ ಓಡಾಡಿ ಬಂದರೂ ದುಡ್ಡು ಹೊಂದಿಸೋದು, ಜಗಳ ಬಿಡಿಸೋದು, ಕೊನೆಗೆ ಹೋಗಿ ಭಾಷಣ ಮಾಡುವುದು ನಾನೇ ಎಂಬ ಸ್ಥಿತಿ ಬಂದಿತ್ತು ಎಂದು ಬೇಸರ ತೋಡಿಕೊಂಡಿದ್ದಾರಂತೆ. 

-ಪ್ರಶಾಂತ್ ನಾತು 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ 
 

loader