ಹಿಂದಿ ಅರ್ಥವಾಗುವುದಿಲ್ಲ ಕನ್ನಡ ಅಥವಾ ಇಂಗ್ಲಿಷ್'ನಲ್ಲಿ ಟ್ವೀಟ್ ಮಾಡಿ ಸಾರ್: ರಾಜ್ಯ ಬಿಜೆಪಿ ಉಸ್ತುವಾರಿಗೆ ಸಿಎಂ ಟಾಂಗ್

Siddaramaiah and Muralidhar rao Tweet war
Highlights

ಬಾದಾಮಿ ಹಾಗೂ ಚಾಮುಂಡೇಶ್ವರಿಯಲ್ಲೂ ನಿಮ್ಮ ಸೋಲು ಖಚಿತ ಎಂದು ಮುರಳಿಧರ್ ರಾವ್ ಅವರು ಇಂದು  ಸಂಜೆ 4 ಗಂಟೆಗೆ  ಟ್ವೀಟ್ ಮಾಡಿದ್ದರು. ಈ ಟ್ವೀಟ್'ಗೆ ಪ್ರತ್ಯುತ್ತರ ನೀಡಿದ ಸಿಎಂ ಸಿದ್ದರಾಮಯ್ಯ ಅವರು ' ಕನ್ನಡ ಅಥವಾ ಇಂಗ್ಲೀಷ್'ನಲ್ಲಿ ಟ್ವೀಟ್ ಮಾಡಿ ಸಾರ್,ನಮಗೆ ಹಿಂದಿ ಅರ್ಥವಾಗುವುದಿಲ್ಲ' ಎಂದಿದ್ದಾರೆ.246 ರಿಟ್ವೀಟ್ 540 ಲೈಕ್ಸ್'ಗಳು ಬಂದಿವೆ.

ಬೆಂಗಳೂರು(ಏ.21): ಕರ್ನಾಟಕ ರಾಜ್ಯ ಬಿಜೆಪಿ ಪಕ್ಷದ ಉಸ್ತುವಾರಿ ಪಿ.ಮುರಳಿಧರ್ ರಾವ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ವಿಷಯದ ಬಗ್ಗೆ ನಾಡಿನ ಭಾಷೆಯ ವಿಷಯದ ಮೇಲೆ ಟಾಂಗ್ ನೀಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುತ್ತೇವೆ. ಬಾದಾಮಿ ಹಾಗೂ ಚಾಮುಂಡೇಶ್ವರಿಯಲ್ಲೂ ನಿಮ್ಮ ಸೋಲು ಖಚಿತ ಎಂದು ಮುರಳಿಧರ್ ರಾವ್ ಅವರು ಇಂದು  ಸಂಜೆ 4 ಗಂಟೆಗೆ  ಟ್ವೀಟ್ ಮಾಡಿದ್ದರು. ಈ ಟ್ವೀಟ್'ಗೆ ಪ್ರತ್ಯುತ್ತರ ನೀಡಿದ ಸಿಎಂ ಸಿದ್ದರಾಮಯ್ಯ ಅವರು ' ಕನ್ನಡ ಅಥವಾ ಇಂಗ್ಲೀಷ್'ನಲ್ಲಿ ಟ್ವೀಟ್ ಮಾಡಿ ಸಾರ್,ನಮಗೆ ಹಿಂದಿ ಅರ್ಥವಾಗುವುದಿಲ್ಲ' ಎಂದಿದ್ದಾರೆ.246 ರಿಟ್ವೀಟ್ 540 ಲೈಕ್ಸ್'ಗಳು ಬಂದಿವೆ.

 

loader