Asianet Suvarna News Asianet Suvarna News

ಉತ್ತಮ ಆಡಳಿತ ಕೊಟ್ಟರು ಅಧಿಕಾರಕ್ಕೆ ಬರಲಿಲ್ಲ: ಸಿದ್ದು ಭಾವುಕ

ಜೆಡಿಎಸ್ ಶಾಸಕಾಂಗ ಸಭೆಗೆ ಬಹುತೇಕ ಶಾಸಕರು ಹಾಜರಾಗಿದ್ದು, ಜೆಡಿಎಸ್ ಕಾರ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.  ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಶಾಸಕಾಂಗ ಈಗಾಗಲೇ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.

Siddaramaiah and Congress Leaders Very Disappointed at Party office

ಬೆಂಗಳೂರು(ಮೇ.16): ಐದು ವರ್ಷ ಉತ್ತಮ ಆಡಳಿತ ನೀಡಿದರೂ ಅಧಿಕಾರಕ್ಕೆ ಬಾರದ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕರಾಗಿದ್ದಾರೆ. 
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಭೆ ಸೇರಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಸೋಲಿನ ಹೊಣೆ ಹೊತ್ತು ಭಾವುಕರಾದರು. ಹಲವು ಶಾಸಕರು ಕೂಡ ಕಣ್ಣೀರು ಹಾಕಿದ್ದು  ಮಾಜಿ ಸಿಎಂ ಅವರನ್ನು ಹಿರಿಯ ನಾಯಕರು ಸಮಾಧಾನ ಪಡಿಸಿದರು ಎನ್ನಲಾಗಿದೆ.
ಈ ನಡುವೆ ಜೆಡಿಎಸ್ ಶಾಸಕಾಂಗ ಸಭೆಗೆ ಬಹುತೇಕ ಶಾಸಕರು ಹಾಜರಾಗಿದ್ದು, ಜೆಡಿಎಸ್ ಕಾರ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.  ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಶಾಸಕಾಂಗ ಈಗಾಗಲೇ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ರಾಜ್ಯಪಾಲರನ್ನು ಭೇಟಿ ಮಾಡಿರುವ ಅವರು ಸರ್ಕಾರ ರಚನೆಗೆ ಒಂದು ವಾರ ಕಾಲಾವಕಾಶ ಅವಕಾಶ ಕೋರಿದ್ದಾರೆ. ಶೀಘ್ರದಲ್ಲಿಯೇ ರಾಜ್ಯ ರಾಜಕಾರಣಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಅಹಮದ್ ಪಟೇಲ್  ಪ್ರವೇಶಿಸಲಿದ್ದಾರೆ.

ಪ್ಲೇಆಫ್ ಹಾದಿಗೆ ರಾಜಸ್ಥಾನ್'ಗೆ ಬಿಗ್ ಶಾಕ್: ಟೂರ್ನಿಯಿಂದ ಇಬ್ಬರು ಔಟ್

Follow Us:
Download App:
  • android
  • ios