ಸಿಎಂಗೆ ಶ್ರೀರಾಮುಲು ಬಹಿರಂಗ ಸವಾಲು

Shri Ramulu Open Challenge to CM Siddaramaiah
Highlights

ಮೋದಿ ಸರ್ಕಾರ ಭ್ರಷ್ಟ ಸರ್ಕಾರ ಎಂದು ಕರೆದ ಸಿಎಂಗೆ ಶ್ರೀರಾಮುಲು ಟಾಂಗ್ ನೀಡಿದ್ದಾರೆ.  ಸ್ವಾತಂತ್ರ್ಯ ಬಳಿಕ ಕಾಂಗ್ರೆಸ್ ಸರ್ಕಾರದ ಹಗರಣ ಕುರಿತು ಬಹಿರಂಗ ಚರ್ಚೆ ಗೆ ಸಿಎಂ ಬರಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ. 

ಬಾದಾಮಿ (ಏ. 30): ಮೋದಿ ಸರ್ಕಾರ ಭ್ರಷ್ಟ ಸರ್ಕಾರ ಎಂದು ಕರೆದ ಸಿಎಂಗೆ ಶ್ರೀರಾಮುಲು ಟಾಂಗ್ ನೀಡಿದ್ದಾರೆ.  ಸ್ವಾತಂತ್ರ್ಯ ಬಳಿಕ ಕಾಂಗ್ರೆಸ್ ಸರ್ಕಾರದ ಹಗರಣ ಕುರಿತು ಬಹಿರಂಗ ಚರ್ಚೆ ಗೆ ಸಿಎಂ ಬರಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ. 

ಮೋದಿಯವರು ಚರ್ಚೆಗೆ ಬೇಡ ನಾನೇ ಬಹಿರಂಗ ಚರ್ಚೆಗೆ ಬರ್ತೀನಿ. ದೇಶದಲ್ಲಿ ಕಾಂಗ್ರೆಸ್ ಆಡಳಿತದ ಭ್ರಷ್ಟಾಚಾರ ಬಯಲು ಮಾಡುವೆ.  ದಾಖಲೆ ಸಮೇತ ಹಗರಣ ಚರ್ಚೆಗೆ ನಾನು ಸಿದ್ಧ. ಸಿದ್ದರಾಮಯ್ಯ ಬಹಿರಂಗ ಚರ್ಚೆ ಗೆ ಬರಲಿ ಎಂದು ಶ್ರೀರಾಮುಲು ಸವಾಲು ಹಾಕಿದ್ದಾರೆ. 

ಸಿದ್ದರಾಮಯ್ಯ ಅಧಿಕಾರದಲ್ಲಿ ಇಲ್ಲದಿದ್ದಾಗ  ಅಹಂಕಾರ ಇದ್ದಿರಲಿಲ್ಲ.  ಅಧಿಕಾರಕ್ಕೆ  ಬಂದ ಸಿದ್ದರಾಮಯ್ಯಗೆ ಅಹಂಕಾರ ತಲೆಗೇರಿದೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಬಾದಾಮಿಯಲ್ಲಿ ಅಮಿತ್ ಶಾ ರೋಡ್ ಶೋಗೆ ಕರೆಸಲು ಚಿಂತನೆಯಿದೆ ಎಂದು ಶ್ರೀರಾಮುಲು ಹೇಳಿದ್ದಾರೆ. 

loader