ಮೈತ್ರಿ ಸರ್ಕಾರಕ್ಕೆ ಆರಂಭದಲ್ಲೇ ವಿಘ್ನ : ಆರ್ ಆರ್ ಕ್ಷೇತ್ರಕ್ಕೆ ಪ್ರತ್ಯೇಕ ಪ್ರಚಾರ

First Published 25, May 2018, 8:25 PM IST
Separate champaign at RR Nagar Constituency Election
Highlights

ಸಹಮತ ಪಡೆಯಲು ಉಭಯ ನಾಯಕರು ಹರಸಾಹಸ ಪಟ್ಟರೂ ಕಣದಿಂದ ಹಿಂದೆ ಸರಿಯಲು ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಹಾಗೂ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ  ನಿರಾಕರಿಸಿದ್ದಾರೆ. 

ಬೆಂಗಳೂರು(ಮೇ.25): ಮೈತ್ರಿ ಸರ್ಕಾರಕ್ಕೆ ಆರಂಭದಲ್ಲೇ  ಸಣ್ಣ ವಿಘ್ನ ಎದುರಾಗಿದೆ. 
ಮೇ.28ರಂದು ನಡೆಯುವ ರಾಜರಾಜೇಶ್ವರಿ ನಗರ ವಿಧಾನಸಬಾ ಚುನಾವಣೆಗೆ ಎರಡೂ ಪಕ್ಷಗಳ ಅಭ್ಯರ್ಥಿಗಳು ಹೊಂದಾಣಿಕೆಯಾಗದ ಕಾರಣ ಪ್ರತ್ಯೇಕವಾಗಿ ಪ್ರಚಾರ ನಡೆಸಲಿದ್ದಾರೆ.
ಸಹಮತ ಪಡೆಯಲು ಉಭಯ ನಾಯಕರು ಹರಸಾಹಸ ಪಟ್ಟರೂ ಕಣದಿಂದ ಹಿಂದೆ ಸರಿಯಲು ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಹಾಗೂ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ  ನಿರಾಕರಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ನಡೆದ ಚರ್ಚೆಯಲ್ಲಿ ಸಿಎಂ ಕುಮಾರಸ್ವಾಮಿ, ಎಚ್.ಡಿ. ರೇವಣ್ಣ, ಡಿಸಿಎಂ ಪರಮೇಶ್ವರ್, ಡಿ.ಕೆ. ಶಿವಕುಮಾರ್ ಮಾತುಕತೆಯಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. 
ಈ ಹಿನ್ನಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ರಾಮಚಂದ್ರಪ್ಪ ಪರ ಪ್ರಚಾರ ನಡೆಸಲು ದೇವೇಗೌಡರ ಸಿದ್ಧತೆ ನಡೆಸುತ್ತಿದ್ದಾರೆ. ಬೆಂಗಳೂರಿನ ನಾಗರಬಾವಿಯಲ್ಲಿರುವ ಹನುಮಂತರಾಯಪ್ಪ ನಿವಾಸದಲ್ಲಿ ಸಭೆ ನಡೆಯುತ್ತಿದ್ದು ಪ್ರಚಾರದ ಕುರಿತು ಮುಖಂಡರಾದ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ, ತುಮಕೂರು ಗ್ರಾಮಾಂತರ ಶಾಸಕ ಗೌರಿ ಶಂಕರ್,ಮದ್ದೂರು ಶಾಸಕ ಡಿ.ಸಿ ತಮ್ಮಣ್ಣ, ಎಂಎಲ್‌ಸಿ ಶರವಣ, ಶಾಸಕ ಗೋಪಾಲಯ್ಯ ಮುಂತಾದ ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ.
ಮತಚೀಟಿ ಅಕ್ರಮದ ಹಿನ್ನಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಚುನಾವಣೆಯನ್ನು ಮೇ.28ಕ್ಕೆ ಮುಂದೂಡಲಾಗಿತ್ತು. 

loader