’ಶ್ರೀರಾಮುಲು ವಾಲ್ಮೀಕಿ ಅಂತ ಚುನಾವಣೆ ಮಾಡೋಕಾಗಲ್ಲ. ಸಿದ್ದರಾಮಯ್ಯ ಕುರುಬ ಅಂತ ಚುನಾವಣೆ ಮಾಡೋಕಾಗಲ್ಲ’

First Published 26, Apr 2018, 3:43 PM IST
Satish Jarakiholi Slams Congress
Highlights

ಶ್ರೀರಾಮುಲು ವಾಲ್ಮೀಕಿ ಅಂತ ಚುನಾವಣೆ ಮಾಡೋಕಾಗಲ್ಲ. ಸಿದ್ದರಾಮಯ್ಯ ಕುರುಬ ಅಂತ ಚುನಾವಣೆ ಮಾಡೋಕಾಗಲ್ಲ. ಬಿಜೆಪಿ ಕಾಂಗ್ರೆಸ್ ಅಂತ ಮಾತ್ರ ನೋಡಬೇಕಾಗುತ್ತೆ. ಯಾವ ಜಾತಿಯವರು ನಿಂತಿದ್ದಾರೆ  ಅನ್ನೋದು ಮುಖ್ಯ ಅಲ್ಲ ಎಂದು ಬಾದಾಮಿಯಲ್ಲಿ ಸತೀಶ್ ಜಾರಕೀಹೊಳಿ ಹೇಳಿದ್ದಾರೆ. 

ಬಾಗಲಕೋಟೆ (ಏ. 26): ಶ್ರೀರಾಮುಲು ವಾಲ್ಮೀಕಿ ಅಂತ ಚುನಾವಣೆ ಮಾಡೋಕಾಗಲ್ಲ. ಸಿದ್ದರಾಮಯ್ಯ ಕುರುಬ ಅಂತ ಚುನಾವಣೆ ಮಾಡೋಕಾಗಲ್ಲ. ಬಿಜೆಪಿ ಕಾಂಗ್ರೆಸ್ ಅಂತ ಮಾತ್ರ ನೋಡಬೇಕಾಗುತ್ತೆ. ಯಾವ ಜಾತಿಯವರು ನಿಂತಿದ್ದಾರೆ  ಅನ್ನೋದು ಮುಖ್ಯ ಅಲ್ಲ ಎಂದು ಬಾದಾಮಿಯಲ್ಲಿ ಸತೀಶ್ ಜಾರಕೀಹೊಳಿ ಹೇಳಿದ್ದಾರೆ. 

ಅವರವರ ಜಾತಿಯವರು ನಿಂತಿದ್ದಾರೆ ಎಂದು  ಅವರು ಈ ಕಡೆ ಬರೋಕಾಗಲ್ಲ. ಇವರು ಆ ಕಡೆ ಹೋಗೋಕೆ ಆಗಲ್ಲ. ಒಂದೊಂದು ಪಕ್ಷಗಳಿಗೆ ಅಂಟಿಕೊಂಡು ಕೆಲಸ ಮಾಡಿರುತ್ತಾರೆ. ಹೀಗಾಗಿ ತಕ್ಷಣಕ್ಕೆ ಬದಲಾಗುವಂತ ಪರಿಸ್ಥಿತಿ ಬಾದಾಮಿಯಲ್ಲಿ ಇಲ್ಲ. ಬಾದಾಮಿಯಲ್ಲಿ ಪಕ್ಷದ ಆಧಾರದ ಮೇಲೆ ಹೊರತು ಜಾತಿ ಆಧಾರದ ಮೇಲೆ ಚುನಾವಣೆ ಮಾಡೋಕೆ ಆಗುವುದಿಲ್ಲ.  ಸಿಎಂ ಸೂಚನೆಯಂತೆ ಬಾದಾಮಿಯಲ್ಲಿ ಸಭೆ ಕರೆದಿದ್ದೇವೆ.  ಎಲ್ಲ ಮುಖಂಡರೊಂದಿಗೆ ಚಚಿ೯ಸಿ ಅಭಿಪ್ರಾಯ ಪಡೆದು ಚುನಾವಣೆ ಕಾಯ೯ತಂತ್ರ ರೂಪಿಸುತ್ತೇವೆ ಎಂದು ಸತೀಶ್ ಜಾರಕೀಹೊಳಿ ಹೇಳಿದ್ದಾರೆ. 

ಈಗಾಗಲೇ ನಮ್ಮ ಟೀಮ್ ಗ್ರೌಂಡ್ ಲೆವಲ್’ನಲ್ಲಿ ಕೆಲಸ ಮಾಡುತ್ತಿದೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಬಾದಾಮಿಯಲ್ಲಿ ಕಾಂಗ್ರೆಸ್ ನಲ್ಲಿ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳಿವೆ ಅದು ಸಹಜ.  ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಎಲ್ಲವನ್ನೂ  ಮರೆತು ಸಿಎಂ ಗೆಲುವಿಗೆ ಶ್ರಮಿಸಬೇಕು. ಸಿಎಂ ಗೆಲುವಿಗೆ ಎಲ್ಲರೂ ಪ್ರಯತ್ನ ಮಾಡುತ್ತೇವೆ. ಬಾದಾಮಿಗೆ ಎರಡ್ಮೂರು ದಿನಕ್ಕೊಮ್ಮೆ ಬಂದು ಇಲ್ಲಿನ ಸ್ಥಿತಿಗತಿ ಬಗ್ಗೆ ಅವಲೋಕಿಸುತ್ತೇನೆ ಎಂದಿದ್ದಾರೆ.  

loader