ಉಪ್ಪಿನ ಪ್ಯಾಕೇಟ್ ಕೊಟ್ಟು ಮತದಾರರಿಗೆ ಆಮಿಷ

karnataka-assembly-election-2018 | Saturday, May 12th, 2018
Sujatha NR
Highlights

ಕರ್ನಾಟಕದಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ಹಲವೆಡೆ ವಿವಿಧ ಆಮಿಷಗಳ ಮೂಲಕ ಮತದಾರರನ್ನು ಸೆಳೆಯುವ ಯತ್ನಗಳು ನಡೆಯುತ್ತಲೇ ಇದೆ.  ಅದರಂತೆ ತುಮಕೂರಲ್ಲಿ ಉಪ್ಪಿನ ಪ್ಯಾಕೇಟ್ ಕೊಟ್ಟು ಮತಯಾಚನೆ ಮಾಡಲಾಗಿದೆ. 

ತುಮಕೂರು : ಕರ್ನಾಟಕದಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ಹಲವೆಡೆ ವಿವಿಧ ಆಮಿಷಗಳ ಮೂಲಕ ಮತದಾರರನ್ನು ಸೆಳೆಯುವ ಯತ್ನಗಳು ನಡೆಯುತ್ತಲೇ ಇದೆ. 

ಅದರಂತೆ ತುಮಕೂರಲ್ಲಿ ಉಪ್ಪಿನ ಪ್ಯಾಕೇಟ್ ಕೊಟ್ಟು ಮತಯಾಚನೆ ಮಾಡಲಾಗಿದೆ.  ಜನರ ಭಾವನೆ ಮೇಲೆ ಸವಾರಿ ಮಾಡಿ ಆಮಿಷ ಒಡ್ಡಲಾಗುತ್ತಿದೆ. 

ಇಲ್ಲಿನ ಗಳೂರಿನಲ್ಲಿ ಗ್ರಾ.ಪಂ.ಅಧ್ಯಕ್ಷೆ ಯಶೋದಮ್ಮ ಪತಿ ಗಂಗಾಧರ್ ಎಂಬುವವರು ಈ ರೀತಿಯ ಆಮಿಷ ಒಡ್ಡಿ ಮತದಾರರನ್ನು ಸೆಳೆವ ಯತ್ನ ಮಾಡಿದ್ದಾರೆ ಎನ್ನಲಾಗಿದೆ. 

ಮತದಾರರಿಗೆ ಹಣ, ಹಾಲಿನ ಪ್ಯಾಕೇಟ್, ಉಪ್ಪಿನ ಪ್ಯಾಕೇಟ್ ಹಾಗೂ ತಲಾ 500 ಹಣ ನೀಡಿ ಮತ ನೀಡಲು ಒತ್ತಾಯ ಮಾಡಲಾಗಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಭ್ಯರ್ಥಿಗಳು ರಾತ್ರಿ ದರ್ಬಾರ್ ನಡೆಸಿದ್ದು, ಈ ವಿಚಾರ ಬೆಳಕಿಗೆ ಬಂದಿದೆ. 

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Sujatha NR