ಗೆಲುವಿನಿಂದ ಭಾವೋದ್ವೇಗಕ್ಕೆ ಒಳಗಾದ ರೂಪಾಲಿ ನಾಯ್ಕ

Roopali naik Got Emotional At Temple
Highlights

ಕಾರವಾರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ರೂಪಾಲಿ ನಾಯ್ಕ ಅವರು ನಗರದ ಶಾಂತಾದುರ್ಗಾ ದೇವಿ ದೇವಸ್ಥಾನದಲ್ಲಿ ಭಾವೋದ್ವೇಗ ಕ್ಕೊಳಗಾದರು. 
 

ಅಂಕೋಲಾ (ಮೇ 17): ಕಾರವಾರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ರೂಪಾಲಿ ನಾಯ್ಕ ಅವರು ನಗರದ ಶಾಂತಾದುರ್ಗಾ ದೇವಿ ದೇವಸ್ಥಾನದಲ್ಲಿ ಭಾವೋದ್ವೇಗ ಕ್ಕೊಳಗಾದರು. 

ಮತ ಎಣಿಕೆ ಮುಗಿಸಿ ಕಾರವಾರಕ್ಕೆ ಮರಳುವ ಮಾರ್ಗ ಮಧ್ಯೆ ಇಲ್ಲಿನ ಶಾಂತಾದುರ್ಗಾ ದೇವಿಯ ಸನ್ನಿಧಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿ ದ್ದಾಗ ಹಠಾತ್ ಭಾವೋದ್ವೇಗಕ್ಕೆ ಒಳಗಾದ ಅವರು ಕೈಯಲ್ಲಿ ತೆಂಗಿನಕಾ
ಯಿ ಹರಿವಾಣ ಹಿಡಿದು ‘ಅಮ್ಮಾ....ಅಮ್ಮಾ...’ ಎಂದು ದೇವಿಯ ಎದುರು  ಕೂಗುತ್ತಿದ್ದರು. 

ಪಕ್ಕದಲ್ಲಿದ್ದವರು ರೂಪಾಲಿ ಅವರನ್ನು ಸಮಾಧಾನ ಪಡಿಸಿ ದರು. ಕೆಲವರು ರೂಪಾಲಿ ಮೈಮೇಲೆ ದೇವರು ಬಂದಿರುವುದಾಗಿಯೂ ಅಭಿಪ್ರಾಯಪಟ್ಟರು!

loader