ಬಾಗಲಕೋಟೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಚುನಾವಣಾ ಕರ್ತವ್ಯನಿರತ ಮೂವರು ಪೊಲೀಸರು ಅಸುನೀಗಿದ್ದಾರೆ. ಸಿಐಡಿಯಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದ ಡಿಎಸ್‌ಪಿ ಬಾಲೇಗೌಡ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಶಿವಸ್ವಾಮಿ ಹಾಗೂ ಚಾಲಕ ವೇಣುಗೋಪಾಲ್ ಕೊನೆಯುಸಿರೆಳೆದಿದ್ದಾರೆ.

ಬಾಗಲಕೋಟೆ : ಬಾಗಲಕೋಟೆಯಲ್ಲಿ ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. 

ಲಾರಿ ಹಾಗೂ ಪೋಲಿಸ್ ವಾಹನದ ನಡುವೆ ಢಿಕ್ಕಿ ಸಂಭವಿಸಿ ದುರ್ಘಟನೆ ಸಂಭವಿಸಿದ್ದು ಮೂವರು ಸ್ಥಳದಲ್ಲಿಯೇ ಮರಣ ಹೊಂದಿದ್ದಾರೆ. 

ಬೆಂಗಳೂರಿನ ಸಿಐಡಿ ಡಿವೈಎಸ್ ಪಿ ಬಾಳೇಗೌಡ ಹಾಗೂ ಸಿಪಿಐ ಶಿವಸ್ವಾಮಿ ಮತ್ತು ಅವರ ಕಾರು ಚಾಲಕ ಸಾವಿಗೀಡಾಗಿದ್ದಾರೆ. 

ಬೆಂಗಳೂರಿನಿಂದ ಬಾಗಲಕೋಟೆ ಗೆ ಚುನಾವಣೆ ಕಾರ್ಯದ ನಿಮಿತ್ತ ಆಗಮಿಸುತ್ತಿದ್ದ ವೇಳೆ ಮಧ್ಯ ರಾತ್ರಿ 12 ಗಂಟೆಗೆ ಅಪಘಾತ ಸಂಭವಿಸಿದೆ. ಬಾಗಲಕೋಟೆ ಬಳಿಯ ಸಂಗಮ ಕ್ರಾಸ್ ಸಮೀಪ ಅಪಘಾತವಾಗಿದೆ. 

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಂಶಿಕೃಷ್ಣ ಹಾಗೂ ಡಿವೈಎಸ್ ಪಿ ಗಿರೀಶ ಸೇರಿದಂತೆ ಇತರ ಅಧಿಕಾರಿಗಳ ತೆರಳಿ ಪರಿಶೀಲನೆ ನಡೆಸಿದ್ದಾರೆ.