ಮುಂದುವರಿದ ಪಕ್ಷಾಂತರ ಪರ್ವ : ಜೆಡಿಎಸ್ ಸೇರಿದ ಬೆಳಮಗಿ

Revu Naik Belamagi quit BJP
Highlights

ರಾಜ್ಯದಲ್ಲಿ ಚುನಾವಣಾ ಭರಾಟೆ ಗರಿಗೆದರಿದಂತೆಯೇ ಪಕ್ಷಾಂತರ ಪರ್ವವೂ ಕೂಡ ಜೋರಾಗಿದೆ. ವಿವಿಧ ಪಕ್ಷಗಳಿಂದ ಅಸಮಾಧಾನಗೊಂಡು ಇನ್ನೊಂದು ಪಕ್ಷಕ್ಕೆ ಜಿಗಿಯುವವರ ಸಂಖ್ಯೆ ದಿನದಿನಕ್ಕೂ ಕೂಡ ಹೆಚ್ಚಾಗುತ್ತಲೇ ಇದೆ.

ಕಲಬುರಗಿ : ರಾಜ್ಯದಲ್ಲಿ ಚುನಾವಣಾ ಭರಾಟೆ ಗರಿಗೆದರಿದಂತೆಯೇ ಪಕ್ಷಾಂತರ ಪರ್ವವೂ ಕೂಡ ಜೋರಾಗಿದೆ. ವಿವಿಧ ಪಕ್ಷಗಳಿಂದ ಅಸಮಾಧಾನಗೊಂಡು ಇನ್ನೊಂದು ಪಕ್ಷಕ್ಕೆ ಜಿಗಿಯುವವರ ಸಂಖ್ಯೆ ದಿನದಿನಕ್ಕೂ ಕೂಡ ಹೆಚ್ಚಾಗುತ್ತಲೇ ಇದೆ.

ಇದೀಗ  ಈ ಸರದಿ ಕಲಬುರಗಿ ಬಿಜೆಪಿ ಮುಖಂಡ ರೇವು ನಾಯ್ಕ್ ಬೆಳಮಗಿಯವರದ್ದು,  ಕಲಬುರಗಿ ಗ್ರಾಮಾಂತರ ಕ್ಷೇತ್ರದಿಂದ ರೇವುನಾಯ್ಕ್ ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.

ಕಲಬುರಗಿ ಗ್ರಾಮಾಂತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡು  ಜೆಡಿಎಸ್ ಮುಖಂಡ ಎಚ್.ಡಿ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಸೇರಿದ್ದಾರೆ.

loader