ಇಂದು ಮೂರು ಮತಗಟ್ಟೆಗಳಲ್ಲಿ ಮರು ಮತದಾನ

Repolling in Lottegollahalli due to EVM failure
Highlights

ತಾಂತ್ರಿಕ ಕಾರಣಗಳಿಂದ ಮತ್ತು ಚುನಾವಣಾ ಸಿಬ್ಬಂದಿಯ ಲೋಪದೋಷದಿಂದಾಗಿ ಮತದಾನಕ್ಕೆ ಅಡ್ಡಿ ಉಂಟಾದ ರಾಜ್ಯದ 3 ಮತಗಟ್ಟೆಗಳಲ್ಲಿ ಇಂದು ಮರು ಮತದಾನ ನಡೆಸಲಾಗುತ್ತಿದೆ. 

ಬೆಂಗಳೂರು (ಮೇ 14) : ತಾಂತ್ರಿಕ ಕಾರಣಗಳಿಂದ ಮತ್ತು ಚುನಾವಣಾ ಸಿಬ್ಬಂದಿಯ ಲೋಪದೋಷದಿಂದಾಗಿ ಮತದಾನಕ್ಕೆ ಅಡ್ಡಿ ಉಂಟಾದ ರಾಜ್ಯದ 3 ಮತಗಟ್ಟೆಗಳಲ್ಲಿ ಇಂದು ಮರು ಮತದಾನ ನಡೆಸಲಾಗುತ್ತಿದೆ. 

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಒಂದು ಮತಗಟ್ಟೆ ಮತ್ತು ಕೊಪ್ಪಳ ಜಿಲ್ಲೆಯ ಕುಷ್ಟಗಿ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಮರುಮತದಾನ ನಡೆಯುತ್ತಿದೆ.  ಮರು ಮತದಾನ ನಡೆಯುವ ಮತಗಟ್ಟೆಯ ಮತದಾರರಿಗೆ ಎಡಗೈ ಮಧ್ಯ ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತಿದೆ. 

ಲೊಟ್ಟೆಗೊಲ್ಲಹಳ್ಳಿಯ ಗಾಂಧಿ ವಿದ್ಯಾಲಯ ಕನ್ನಡ ಮತ್ತು ತಮಿಳು ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತಯಂತ್ರ ದೋಷ ಕಂಡು ಬಂದ ಹಿನ್ನೆಯಲ್ಲಿ ಮತದಾನ ಸ್ಥಗಿತಗೊಳಿಸಲಾಗಿತ್ತು. ಇನ್ನು ಕುಷ್ಟಗಿಯ 20 ಮತ್ತು 21ರ ಮತಗಟ್ಟೆಯಲ್ಲಿ ಮತದಾನ ತಪ್ಪಾಗಿದೆ. ಸುಮಾರು 275 ಮಂದಿಯ ಮತದಾನ ತಪ್ಪಾಗಿ ನಡೆದಿದೆ. 

ಮೇಲ್ನೋಟಕ್ಕೆ ಸಿಬ್ಬಂದಿಯ ದೋಷದಿಂದ ಇದು ನಡೆದಿರುವುದು ಗೊತ್ತಾಗಿದೆ. ಹೀಗಾಗಿ ಮೂರು ಮತಗಟ್ಟೆಯಲ್ಲಿ ಮರು ಮತದಾನ ನಡೆಯಲಿದೆ ಎಂದು ಹೇಳಿದರು. ಲೊಟ್ಟೆಗೊಲ್ಲಹಳ್ಳಿಯ ಮತಗಟ್ಟೆಯಲ್ಲಿ 144೧ ಮತದಾರರಿದ್ದು, 704 ಮಹಿಳೆಯರಿದ್ದಾರೆ. 

loader