ಬೆಂಗಳೂರು (ಮೇ. 22): ಕರ್ನಾಟಕದಲ್ಲಿ ಕಾಂಗ್ರೆಸ್ ಸೀಟುಗಳು ಕಡಿಮೆ ಆಗಲು ಸಿದ್ದರಾಮಯ್ಯ ವಿರುದ್ಧದ ಜನರ ಸಿಟ್ಟು ಮುಖ್ಯ ಕಾರಣ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ವರದಿ ನೀಡಿದ್ದಾರಂತೆ. ಆದರೆ, ಚುನಾವಣೆ ಘೋಷಣೆ ಆಗುವವರೆಗೆ ಸಿದ್ದು ವಿರುದ್ಧದ ಸಿಟ್ಟು ಇದೆ ಎಂಬುದೇ ಗೊತ್ತಾಗಲಿಲ್ಲ.

ಮುಖ್ಯವಾಗಿ ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಸಿದ್ದು ವಿರುದ್ಧದ  ಸಿಟ್ಟಿನಿಂದ ಕಾಂಗ್ರೆಸ್ಸನ್ನು ಸೋಲಿಸಲು ಮತ ನೀಡಿದರೆ, ಕರಾವಳಿಯಲ್ಲಿ ಹಿಂದುತ್ವದ ವಿರುದ್ಧ ಕಾಂಗ್ರೆಸ್ ಎಂಬ ಪ್ರಚಾರ ದುಬಾರಿ ಆಯಿತು ಎಂದು ರಾಹುಲ್ ಬಳಿ ಹೇಳಿಕೊಂಡಿದ್ದಾರಂತೆ. ಇದಕ್ಕೆ ಪ್ರತಿಯಾಗಿ ಕುರುಬರು, ಮುಸ್ಲಿಮರು ಮತ್ತು ದಲಿತ ಬಲಗೈ ಹೊರತಾಗಿ ಉಳಿದವರು ಪಕ್ಷದ ಪರ ಗಟ್ಟಿಯಾಗಿ ನಿಲ್ಲಲಿಲ್ಲ ಎಂದು ಕೂಡ ವಿಶ್ಲೇಷಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 

-ಪ್ರಶಾಂತ್ ನಾತು 

ರಾಜಕಾರಣದ ಮಾಹಿತಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ