ಕೊಪ್ಪಳದ ಒಂದು ಮತಗಟ್ಟೆಯಲ್ಲೂ ಮರು ಮತದಾನ

First Published 13, May 2018, 9:12 PM IST
Re Voting at Koppala Constituency Voting Booths
Highlights

ಮನ್ನೇರಾಳ ಗ್ರಾಮದ ಎರಡು ಮತಗಟ್ಟೆಯಲ್ಲಿ ಮರು ಮತದಾನಕ್ಕೆ ಚುನಾವಣೆ ಆಯೋಗ‌ ಸಿದ್ಧತೆ ನಡೆಸಿದೆ. ಗ್ರಾಮದ ಮತಗಟ್ಟೆ ಸಂಖ್ಯೆ ಸಂಖ್ಯೆ 20 ಮತ್ತು 21 ರಲ್ಲಿ ಮರು ಮತದಾನ ನಡೆಯಲಿದೆ. ಮತಗಟ್ಟೆಯಲ್ಲಿನ ಮತದಾನದ  ಸಂಖ್ಯೆಗಿಂತ ಹೆಚ್ಚು ಮತ ಚಲಾವಣೆಯಾಗಿದೆ.

ಕೊಪ್ಪಳ(ಮೇ.13): ಮತಯಂತ್ರ ಹಾಗೂ ಮತಗಟ್ಟೆ ಸಿಬ್ಬಂದಿ ಯಡವಟ್ಟಿನಿಂದ ನಾಳೆ ಕೊಪ್ಪಳ ಜಿಲ್ಲೆ ಕುಷ್ಟಗಿ ವಿಧಾನಸಭೆ ಕ್ಷೇತ್ರದ ಮನ್ನೇರಾಳ ಗ್ರಾಮದಲ್ಲಿ ಮರು ಮತದಾನ ನಡೆಯಲಿದೆ. 
ಮನ್ನೇರಾಳ ಗ್ರಾಮದ ಎರಡು ಮತಗಟ್ಟೆಯಲ್ಲಿ ಮರು ಮತದಾನಕ್ಕೆ ಚುನಾವಣೆ ಆಯೋಗ‌ ಸಿದ್ಧತೆ ನಡೆಸಿದೆ. ಗ್ರಾಮದ ಮತಗಟ್ಟೆ ಸಂಖ್ಯೆ ಸಂಖ್ಯೆ 20 ಮತ್ತು 21 ರಲ್ಲಿ ಮರು ಮತದಾನ ನಡೆಯಲಿದೆ. ಮತಗಟ್ಟೆಯಲ್ಲಿನ ಮತದಾನದ  ಸಂಖ್ಯೆಗಿಂತ ಹೆಚ್ಚು ಮತ ಚಲಾವಣೆಯಾಗಿದೆ. ಆದರೆ ಮರು ಮತದಾನಕ್ಕೆ ಡಿಸಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ.ಕನಗವಲ್ಲಿ ನಿಖರ ಕಾರಣ ಹೇಳಲಿಲ್ಲ. 
ಬೆಂಗಳೂರಿನ ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿ ಮತಗಟ್ಟೆಯಲ್ಲೂ  ಇವಿಎಂ ತಂತ್ರಿಕ ದೋಷ  ಉಂಟಾಗಿರುವ ಕಾರಣದಿಂದ ಚುನಾವಣಾ ಆಯೋಗ ಮರು ಮತದಾನ ನಡೆಸಲು ನಿರ್ಧರಿಸಿದೆ.  ಮೇ.15 ರಂದು ಮಧ್ಯಾಹ್ನದ ಹೊತ್ತಿಗೆ ರಾಜ್ಯದ 222 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ.

loader