ಲೊಟ್ಟೆಗೊಲ್ಲಹಳ್ಳಿ ಮತಗಟ್ಟೆಯಲ್ಲಿ ಮರು ಮತದಾನಕ್ಕೆ ಆದೇಶ

Re-Election in Lottegolla halli constituency
Highlights

ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿ ಮತಗಟ್ಟೆ 158 ರಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶಿಸಿದೆ.  ಬೆಳಿಗ್ಗೆಯಿಂದ ಇವಿಎಂನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಸಂಜೆಯಾದರೂ ಇನ್ನೂ ಸಮಸ್ಯೆ ಬಗೆಹರಿದಿಲ್ಲ. ಮತ ಹಾಕಲು ಬಂದ ಜನ ವಾಪಸ್ಸಾಗಿದ್ದಾರೆ. 

ಬೆಂಗಳೂರು (ಮೇ. 12): ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿ ಮತಗಟ್ಟೆ 158 ರಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶಿಸಿದೆ. 

ಬೆಳಿಗ್ಗೆಯಿಂದ ಇವಿಎಂನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಸಂಜೆಯಾದರೂ ಇನ್ನೂ ಸಮಸ್ಯೆ ಬಗೆಹರಿದಿಲ್ಲ. ಮತ ಹಾಕಲು ಬಂದ ಜನ ವಾಪಸ್ಸಾಗಿದ್ದಾರೆ. ಈ ಬೂತ್ ನಲ್ಲಿ 1400 ಮತದಾರರು ಇದ್ದಾರೆ ಎನ್ನಲಾಗಿದ್ದು ಮೇ.14 ರಂದು ಮರು ಮತದಾನ ನಡೆಯಲಿದೆ. 

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿ ಮತಗಟ್ಟೆ 158 ರಲ್ಲಿ ಇವಿಎಂನಲ್ಲಿ ದೋಷ ಕಾಣಿಸಿಕೊಂಡಿತ್ತು. ಬೆಳಿಗ್ಗೆ 7. 30 ರಿಂದ ಶುರುವಾದ ಸಮಸ್ಯೆ ಸಂಜೆಯವರೆಗೂ ಸರಿಯಾಗಿಲ್ಲ. ಹಾಗಾಗಿ ಈ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶಿಸಿದೆ.  

loader