ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾಲೆಳೆದ ರಮ್ಯಾ

Ramya tweet against BJP national president Amit Shah
Highlights

ಸದಾ ಒಂದಲ್ಲ ಒಂದು ರೀತಿಯಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾಲೆಳೆಯುವ ರಮ್ಯಾ, ಇದೀಗ ಮತ್ತೆ ಶಾ ಕಾಲೆಳೆದಿದ್ದಾರೆ. ಶಾ ಅವರು ದಪ್ಪಗಿದ್ದಾರೆಂದು ಹೇಳಲು ಹೊರಟಿದ್ದಾರೋ ಅಥವಾ ಮಾಂಸಾಹಾರ ಸೇವಿಸುತ್ತಾರೆ ಎಂದು ಆರೋಪಿಸುತ್ತಾರೋ, ಎಂಬುವುದು ಮಾತ್ರ ಸ್ಪಷ್ಟವಾಗುತ್ತಿಲ್ಲ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಸದಾ ಟೀಕಿಸುವ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ, ಮತ್ತೆ ಶಾ ಕಾಲೆಳೆದಿದ್ದಾರೆ.

ಗವಿ ಮಠದ ಪ್ರವೇಶ ದ್ವಾರ ಚಿಕ್ಕದಿದ್ದ ಕಾರಣ, ಅಮಿತ್ ಶಾ ಅವರು ಮಠವನ್ನು ಪ್ರವೇಶಿಸಿರಲಿಲ್ಲ. ಇದನ್ನು ಪ್ರಕಟಿಸಿದ ಸುದ್ದಿಯೊಂದಿಗೆ 'ಶಾ ಸಸ್ಯಾಹಾರಿ ಅಲ್ಲವೇ?' ಎಂದು ಪ್ರಶ್ನಿಸಿ ರಮ್ಯಾ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಇದರೊಟ್ಟಿಗೆ ಫೆಬ್ರವರಿ 10ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗವಿ ಮಠವನ್ನು ಪ್ರವೇಶಿಸಿರುವ ವೀಡಿಯೋ ಟ್ವೀಟ್ ಮಾಡಿದ್ದು, ರಮ್ಯಾ ಏನು ಹೇಳಲು ಇಚ್ಚಿಸುತ್ತಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ. 

ಇದಕ್ಕೆ ಪರ, ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಶೇ.80ರಂದು ಭಾರತವನ್ನು ಶಾ-ಮೋದಿ ನೇತೃತ್ವದಲ್ಲಿ ಬಿಜೆಪಿ ತಿಂದಿದ್ದು, ಇನ್ನೂ ಹಸಿವು ನೀಗಿದಂತೆ ಎನಿಸುವುದಿಲ್ಲವೆಂದು ಒಬ್ಬರು ಹೇಳಿದ್ದಾರೆ.

ದೇವಸ್ಥಾನವೊಂದಕ್ಕೆ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರು ಮಾಂಸಹಾರ ಸೇವಿಸಿ ಹೋಗಿದ್ದಾರೆಂಬುವುದು ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿಯೂ ರಮ್ಯಾ, ಈ ಟ್ವೀಟ್ ಮಾಡಿದ್ದಾರೆಂದು, 'ಶಾ ಮಾಂಸ ತಿಂದಂತೂ ದೇವಸ್ಥಾನಕ್ಕೆ ಹೋಗುವುದಿಲ್ಲ,' ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

'ನೀನು ಹತ್ತು ಜನ್ಮ ಎತ್ತಿ ಬಂದ್ರೂ ಮೋದಿಜಿಗೆ ಮತ್ತು ಅಮೀತ್ ಶಾಗೆ ಸರಿ ಸಾಟಿ ಆಗುವುದಿಲ್ಲ. ಅಂಥ ಎತ್ತರದ ಸ್ಥಾನವೂ ಸಿಗೋಲ್ಲ. ನೀನು ಕಾಂಗ್ರೆಸ್‌ನ ಬಲಿಕುರಿ ಅಷ್ಟೇ. ಜೀವಮಾನವಿಡೀ ಹೀಗೆ ನೀನು ಕೀಳು ಮಟ್ಟದ ಟೀಕೆಗಳನ್ನು ಮಾಡ್ತಾನೇ ಕಾಲ ಕಳಿಬೇಕು,' ಎಂದು ಮಗದೊಬ್ಬರು ಆಕ್ರೋಶಭರಿತ ಟ್ವೀಟ್ ಮಾಡಿದ್ದಾರೆ.
 

loader