ಸ್ಪೀಕರ್ ಆಗಿ ರಮೇಶ್ ಕುಮಾರ್ ಅವಿರೋಧ ಆಯ್ಕೆ

First Published 25, May 2018, 12:22 PM IST
Ramesh Kumar Elected Speaker Unopposed
Highlights

ಸಂಸದೀಯ ಸಂಪ್ರದಾಯಕ್ಕೆ ಅನುಗುಣವಾಗಿ ಸಭಾಧ್ಯಕ್ಷರು ಸರ್ವಾನುಮತದಿಂದ ಆಯ್ಕೆಯಾಗುವುದು ಸೂಕ್ತವೆಂದು ಅಭಿಪ್ರಾಯ ಪಟ್ಟ ಕಾರಣ  ನಾಮಪತ್ರ ವಾಪಸ್ಸು ಪಡೆಯುತ್ತಿದ್ದೇನೆ  ಎಂದು ಟ್ವಿಟರ್'ನಲ್ಲಿ ತಿಳಿಸಿದ್ದಾರೆ.

ಬೆಂಗಳೂರು(ಮೇ.25): ವಿದಾನಸಭೆಯ ಸ್ಪೀಕರ್ ಸ್ಥಾನಕ್ಕೆ ಬಿಜೆಪಿಯ ಶಾಸಕ ಸುರೇಶ್ ಕುಮಾರ್ ನಾಮಪತ್ರ ವಾಪಸ್ ಪಡೆದ ಹಿನ್ನಲೆಯಲ್ಲಿ ಮೈತ್ರಿ ಪಕ್ಷದ ರಮೇಶ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಮ್ಮ ಪಕ್ಷದ ಸೂಚನೆಯಂತೆ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸಿದ್ದೆ. ಈಗ ಪಕ್ಷದಲ್ಲಿ ಮತ್ತೊಮ್ಮೆ  ಚರ್ಚಿಸಿದಂತೆ, ಸಂಸದೀಯ ಸಂಪ್ರದಾಯಕ್ಕೆ ಅನುಗುಣವಾಗಿ ಸಭಾಧ್ಯಕ್ಷರು ಸರ್ವಾನುಮತದಿಂದ ಆಯ್ಕೆಯಾಗುವುದು ಸೂಕ್ತವೆಂದು ಅಭಿಪ್ರಾಯ ಪಟ್ಟ ಕಾರಣ  ನಾಮಪತ್ರ ವಾಪಸ್ಸು ಪಡೆಯುತ್ತಿದ್ದೇನೆ  ಎಂದು ಟ್ವಿಟರ್'ನಲ್ಲಿ ತಿಳಿಸಿದ್ದಾರೆ.

  • 28 ವರ್ಷದ ನಂತರ ರಮೇಶ್ ಕುಮಾರ್ ಮತ್ತೆ  ಸ್ಪೀಕರ್
  • ದೇವೇಗೌಡ, ಜೆ.ಎಚ್.ಪಟೇಲ್ ಅವಧಿಯಲ್ಲಿ ಸ್ಪೀಕರ್ ಆಗಿದ್ದ ರಮೇಶ್​​ಕುಮಾರ್
  • ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ರಮೇಶ್​ಕುಮಾರ್ ಆರೋಗ್ಯ ಸಚಿವ
  • ಶ್ರೀನಿವಾಸಪುರ ಕ್ಷೇತ್ರದಿಂದ 6ನೇ ಬಾರಿ ಶಾಸಕರಾಗಿರುವ ರಮೇಶ್​ಕುಮಾರ್

 

loader