ಚೀನಾ ವಸ್ತುವಿಗೂ ಮೋದಿ ಮಾತಿಗೂ ಗ್ಯಾರಂಟಿ ಇಲ್ಲ

Ramalinga Reddy Slams PM Modi
Highlights

ಕರ್ನಾಟಕಕ್ಕೆ ಬರುವ ಮೊದಲು ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಹೋಗಿ ಬಂದಿದ್ದರು. ಹೀಗಾಗಿ ಅವರ ಮಾತುಗಳು ಚೀನಾದ ವಸ್ತುಗಳ ರೀತಿಯಾಗಿದೆ. ಏಕೆಂದರೆ, ಚೀನಾ ವಸ್ತುಗಳಿಗೂ ಮೋದಿ ಮಾತಿಗೂ ಎರಡ ಕ್ಕೂ   ಗ್ಯಾರಂಟಿಯಿಲ್ಲ, ವಾರಂಟಿಯೂ ಇಲ್ಲ ಎಂದು ಗೃಹ ಸಚಿವ ಆರ್. ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ. 

ಬೆಂಗಳೂರು: ಕರ್ನಾಟಕಕ್ಕೆ ಬರುವ ಮೊದಲು ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಹೋಗಿ ಬಂದಿದ್ದರು. ಹೀಗಾಗಿ ಅವರ ಮಾತುಗಳು ಚೀನಾದ ವಸ್ತುಗಳ ರೀತಿಯಾಗಿದೆ. ಏಕೆಂದರೆ, ಚೀನಾ ವಸ್ತುಗಳಿಗೂ ಮೋದಿ ಮಾತಿಗೂ ಎರಡ ಕ್ಕೂ   ಗ್ಯಾರಂಟಿಯಿಲ್ಲ, ವಾರಂಟಿಯೂ ಇಲ್ಲ ಎಂದು ಗೃಹ ಸಚಿವ ಆರ್. ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ. 

ನಗರದ ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸಾಲು ಸಾಲು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಬೆಂಗಳೂರು ನಂಬರ್ ಒನ್ ಕ್ರೈಂ ಸಿಟಿ ಎಂದು ಆರೋಪಿಸಿ ದ್ದಾರೆ. 
ಕೇಂದ್ರ ಸರ್ಕಾರದ ಎನ್‌ಸಿಆರ್‌ಬಿ ವರದಿ ಪ್ರಕಾರ ಬಿಜೆಪಿ ಅಧಿಕಾರದಲ್ಲಿರುವ ಉತ್ತರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳು ಮುಂಚೂಣಿಯಲ್ಲಿವೆ.

ಕರ್ನಾ ಟಕ 10ನೇ ಸ್ಥಾನದಲ್ಲಿದೆ. ಆದರೂ ಪ್ರಧಾನಿ ಮೋದಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಪರಾಧ ಪ್ರಮಾಣ ಕಡಿತಕ್ಕೆ ಪ್ರಯತ್ನಿಸುವ ಬದಲಾಗಿ, ಕರ್ನಾಟಕದ ಬಗ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು. 

loader