Asianet Suvarna News Asianet Suvarna News

6 ಗೆಲುವು ಪಡೆದ ರಾಮಲಿಂಗಾರೆಡ್ಡಿಗೆ ಒಲಿಯುತ್ತಾ 7ನೇ ಜಯ

ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳ ಪೈಕಿ ಒಂದಾಗಿರುವ ಬಿಟಿಎಂ ಲೇಔಟ್ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರ. 2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಿಂದ ಅಸ್ತಿತ್ವಕ್ಕೆ ಬಂದ ಬಿಟಿಎಂ (ಬೈರಸಂದ್ರ, ತಾವರೆಕೆರೆ, ಮಡಿವಾಳ)ಲೇಔಟ್ ಪ್ರಸ್ತುತ ಕಾಂಗ್ರೆಸ್ ಭದ್ರಕೋಟೆ. ಸತತವಾಗಿ ಏಳು ಚುನಾವಣೆಗಳನ್ನು ಎದುರಿಸಿ, ಆರು ಬಾರಿ ಗೆಲುವು ಸಾಧಿಸಿದ ಹಿರಿಯ ರಾಜಕಾರಣಿ ರಾಮಲಿಂಗಾರೆಡ್ಡಿ ಇದೀಗ ಮತ್ತೊಮ್ಮೆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

Ramalinga Reddy Contest From BTM

? ಸಂಪತ್ ತರೀಕೆರೆ

ಬೆಂಗಳೂರು : ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳ ಪೈಕಿ ಒಂದಾಗಿರುವ ಬಿಟಿಎಂ ಲೇಔಟ್ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರ. 2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಿಂದ ಅಸ್ತಿತ್ವಕ್ಕೆ ಬಂದ ಬಿಟಿಎಂ (ಬೈರಸಂದ್ರ, ತಾವರೆಕೆರೆ, ಮಡಿವಾಳ)ಲೇಔಟ್ ಪ್ರಸ್ತುತ ಕಾಂಗ್ರೆಸ್ ಭದ್ರಕೋಟೆ.

ಸತತವಾಗಿ ಏಳು ಚುನಾವಣೆಗಳನ್ನು ಎದುರಿಸಿ, ಆರು ಬಾರಿ ಗೆಲುವು ಸಾಧಿಸಿದ ಹಿರಿಯ ರಾಜಕಾರಣಿ ರಾಮಲಿಂಗಾರೆಡ್ಡಿ ಇದೀಗ ಮತ್ತೊಮ್ಮೆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಬಿಟಿಎಂ ಲೇಔಟ್ ಹೊಸಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರದ ಎರಡು ಬಾರಿಯೂ ರಾಮಲಿಂಗಾರೆಡ್ಡಿ ಜಯ ಸಾಧಿಸಿದ್ದಾರೆ. ಹೀಗೆ ಬೇರು ಬಿಟ್ಟಿರುವ ರಾಮಲಿಂಗಾರೆಡ್ಡಿ ಅವರಿಗೆ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ಬಿಜೆಪಿಯ ಲಲ್ಲೇಶ್ ರೆಡ್ಡಿ  ಪ್ರತಿಸ್ಪರ್ಧಿ.

ಕ್ಷೇತ್ರದ ಎಲ್ಲ ವಾರ್ಡ್‌ಗ ಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಮಡಿವಾಳ- ಸಿಲ್ಕ್ ಬೋರ್ಡ್ ವರೆಗೆ ಫ್ಲೇಓವರ್, 204 ಕೋಟಿ ವೆಚ್ಚದಲ್ಲಿ ಆಡು ಗೋಡಿ- ಮಡಿವಾಳದ ವರೆಗೆ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ, 6 ಸ್ಕೈ ವಾಕ್ ನಿರ್ಮಾಣ, ತಾವರಕೆರೆಯಲ್ಲಿ ಹೆರಿಗೆ ಆಸ್ಪತ್ರೆ, ಎರಡು ಕಡೆ ಡಯಾಲಿಸಿಸ್ ಕೇಂದ್ರ, ಕಾಂಕ್ರೆಟ್ ರಸ್ತೆಗಳ ನಿರ್ಮಾಣ ಹೀಗೆ ಹಲವು ಅಭಿವೃದ್ಧಿ ಕಾರ್ಯ ಗಳು ರಾಮಲಿಂಗಾರೆಡ್ಡಿ ಗೆಲುವಿಗೆ ಶ್ರೀರಕ್ಷೆಯಾಗ ಬಹುದು. 

ಜತೆಗೆ ಈ ಕ್ಷೇತ್ರದಲ್ಲಿ ಇರುವ ಒಟ್ಟು ಎಂಟು ವಾರ್ಡ್‌ಗಳಲ್ಲಿ ಎರಡರಲ್ಲಿ ಬಿಜೆಪಿ, ಒಂದರಲ್ಲಿ ಜೆಡಿಎಸ್ ಹಾಗೂ ಐದು ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿದ್ದಾರೆ. ಇದು ಕಾಂಗ್ರೆಸ್‌ಗೆ ಸಹಕಾರಿ. ಈಗ ತಾನೇ ರಾಜಕೀಯಕ್ಕೆ ಮೊದಲ ಹೆಜ್ಜೆ ಇಟ್ಟಿ ರುವ ಬಿಜೆಪಿಯ ಲಲ್ಲೇಶ್ ರೆಡ್ಡಿಗೆ ಸಹಕಾರಿಯಾಗಿರುವ ಅಂಶ ಗಣಿ ಧಣಿ ರೆಡ್ಡಿ ಸಹೋದರರ ಸಂಬಂಧಿ ಎಂಬು ದು ಮತ್ತು ಚುನಾವಣಾ ರಾಜಕಾರಣದಲ್ಲಿ ರೆಡ್ಡಿ ಧಣಿಗಳ ತಂತ್ರಗಾರಿಕೆ. 

ಇದಲ್ಲದೆ, ಬಿಜೆಪಿಯ ಸಾಂಪ್ರಾದಾಯಿಕ ಮತಗಳು ಈ ಕ್ಷೇತ್ರದಲ್ಲಿ ಉತ್ತಮವಾಗಿಯೇ ಇದೆ. ಇದು ಲಲ್ಲೇಶ್ ರೆಡ್ಡಿಗೆ ಸಹಾಯಕ. ಇದೆಲ್ಲದರ ಪರಿಣಾಮವಾಗಿ ಈ ಬಾರಿ ಈ ಕ್ಷೇತ್ರ ದಲ್ಲಿ ‘ಕೈ’ ಮತ್ತು ‘ಕಮಲ’ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ನಡೆಯಬಹುದೆಂಬ ಕುತೂಹಲ ಕ್ಷೇತ್ರದ ಮತದಾರರಲ್ಲಿದೆ. ಲಲ್ಲೇಶ್ ರೆಡ್ಡಿ ಅವರು ಕ್ಷೇತ್ರ ವ್ಯಾಪಿ ಇರುವ ಸಮಸ್ಯೆಗಳನ್ನು ಮನೆ ಮನೆಗೂ ತಲುಪಿಸುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ವೈಫಲ್ಯ ವನ್ನು ಮತಗಳಾಗಿ ಪರಿವರ್ತಿಸಿಕೊಳ್ಳುವ ಪ್ರಯತ್ನ.

ಅವರದ್ದು. ಈ ನಡುವೆ ಕೇಂದ್ರ ಸರ್ಕಾರ ಸಾಧನೆಗಳು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ಯೋಜನೆಗಳ  ಮೂಲಕ ಯುವಜನರನ್ನು ತಲುಪುವ ಗುರಿ ಇಟ್ಟುಕೊಂಡು ಚುರುಕಿನ ಪ್ರಚಾರದಲ್ಲಿ ಬಿಜೆಪಿ ಕಾರ್ಯಕರ್ತರು ತೊಡಗಿದ್ದಾರೆ. ಸಡ್ಡು ಹೊಡೆಯಲು ತಯಾರಿ: ಬಿಟಿಎಂ ಲೇಔಟ್ ವಾರ್ಡ್ ಬಿಬಿಎಂಪಿ ಸದಸ್ಯ ಕೆ.ದೇವದಾಸ್ ಅವರನ್ನೇ ಜೆಡಿಎಸ್ ತನ್ನ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದೆ. ಕ್ಷೇತ್ರ ದ ಏಕೈಕ ಜೆಡಿಎಸ್ ಸದಸ್ಯರಾಗಿ ಚುನಾಯಿತರಾಗಿರುವ ದೇವದಾಸ್ ಸ್ಥಳೀಯರು. 

ರೆಡ್ಡಿ ಮತ್ತು ತಿಗಳ ಸಮುದಾಯದ ಮತದಾರರು ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಮುಸ್ಲಿಂ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತದಾರರು. ಚುನಾವಣಾ ಫಲಿತಾಂಶದಲ್ಲಿ ನಿರ್ಣಯಕ ಪಾತ್ರ ವಹಿಸಲಿದ್ದಾರೆ. ಕ್ರೈಸ್ತರು ಸೇರಿದಂತೆ ಇತರೆ ಹಿಂದುಳಿದ ಜನಾಂಗದವರ ಸಂಖ್ಯೆಯೂ ಹೆಚ್ಚಿದ್ದು, ತಮಿಳರು, ಕೇರಳಿಗರು ಹಾಗೂ ವಲಸೆ ಬಂದಿರುವ ಉತ್ತರ ಮತ್ತು ಈಶಾನ್ಯ ಭಾರತೀಯರು ಇಲ್ಲಿ ಮತದಾನದ ಹಕ್ಕು ಪಡೆದಿದ್ದಾರೆ.

ಬಿಟಿಎಂ ಲೇಔಟ್‌ನ ಕೆಲವು ಪ್ರದೇಶಗಳಲ್ಲಿ ಅಭಿ ವೃದ್ಧಿ ಕೊರತೆ ಇದ್ದು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇದನ್ನೇ ಪ್ರಮುಖ ವಿಷಯವಾಗಿ ಪ್ರಚಾರದ ಲ್ಲಿ ಬಳಸಿ ಕೊಳ್ಳುತ್ತಿವೆ. ಇನ್ನು ಕೋರಮಂಗಲದಿಂದ ಬೊಮ್ಮನ ಹಳ್ಳಿ ಮಾರ್ಗದಲ್ಲಿನ ಟ್ರಾಫಿಕ್ ಸಮಸ್ಯೆ ಕೂಡ ಕಾಂಗ್ರೆ ಸ್ ಅಭ್ಯರ್ಥಿಗೆ ಸ್ವಲ್ಪ ತೊಡಕಾಗಬಹುದು. 

ಜತೆಗೆ ಈ ಕ್ಷೇತ್ರ ಸ್ವಲ್ಪ ತಗ್ಗಿನ ಪ್ರದೇಶದಲ್ಲಿ ಇರುವುದರಿಂದ ಮಳೆ ಗಾಲದ ಸಂದರ್ಭದಲ್ಲಿ ಈಜೀಪುರ, ಜಕ್ಕಸಂದ್ರ, ಆಡುಗೋಡಿ, ಸುದ್ದುಗುಂಟೆ ಪಾಳ್ಯ, ಮಡಿವಾ ಳದ ಕೆಲವು ಪ್ರದೇಶಗಳ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿದೆ. ಇದು ಕೂಡ ಚುನಾವಣೆ ಮತದಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. 

Follow Us:
Download App:
  • android
  • ios