ನರೇಂದ್ರ ಮೋದಿ ವಿರುದ್ಧ ಖ್ಯಾತ ವಕೀಲ ರಾಮ್ ಜೇಠ್ಮಾಲಾನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಮೇ. 07): ನರೇಂದ್ರ ಮೋದಿ ವಿರುದ್ಧ ಖ್ಯಾತ ವಕೀಲ ರಾಮ್ ಜೇಠ್ಮಾಲಾನಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ವಿದೇಶಗಳಲ್ಲಿರುವ ಬ್ಲಾಕ್ ಮನಿ ವಾಪಸ್ ತರಲು ನನಗೆ ಸಹಾಯ ಮಾಡುವಂತೆ 2011 ರಲ್ಲಿ ಕೇಳಿಕೊಂಡಿದ್ದರು. ಮೋದಿಯನ್ನು ನಂಬಿ ಬ್ಲಾಕ್ ಮನಿ ಸಂಬಂಧ ಎಲ್ಲ ರೀತಿ ಸಹಾಯ ಮಾಡಿದೆ. ಆದರೆ ಮೋದಿ ನನ್ನನ್ನು ಮೂರ್ಖನನ್ನಾಗಿ ಮಾಡಿದರು. ಚುನಾವಣಾ ಪ್ರಣಾಳಿಕೆಯಲ್ಲಿ ಸಾಕಷ್ಟು ಭರವಸೆ ನೀಡಿದ್ದರು ಆದರೆ ಯಾವುದೂ ಈಡೇರಿಸಿಲ್ಲ. ಅಮಿತ್ ಷಾ ಕೂಡ ಚುನಾವಣಾ ಭಾಷಣಗಳಲ್ಲೂ ಮಾತನಾಡ್ತಾರೆ. ದೇಶದ ಜನರು ಮೋಸ ಮಾಡುತ್ತಿದ್ದಾರೆ. ಕರ್ನಾಟಕ ಜನ ಮೋದಿಗೆ ತಕ್ಕ ಬುದ್ದಿ ಕಲಿಸಬೇಕು ಎಂದು ರಾಮ್ ಜೇಠ್ಮಾಲಾನಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
