ದೇವೇಗೌಡರ ಬಳಿ ಕ್ಷಮೆ ಕೇಳಿದ ರಾಹುಲ್ ಗಾಂಧಿ

karnataka-assembly-election-2018 | Saturday, May 19th, 2018
Suvarna Web Desk
Highlights

ಚುನಾವಣೆ ಸಂದರ್ಭದಲ್ಲಿ ದೇವೇಗೌಡರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕ್ಷಮೆ ಯಾಚಿಸಿದರು ಎಂದು ಹೇಳಲಾಗಿದೆ. 

ನವದೆಹಲಿ/ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ದೇವೇಗೌಡರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕ್ಷಮೆ ಯಾಚಿಸಿದರು ಎಂದು ಹೇಳಲಾಗಿದೆ. 

ಗುರುವಾರ ದೇವೇಗೌಡರಿಗೆ ಕರೆ ಮಾಡಿದ್ದ ರಾಹುಲ್ ಅವರು ಹುಟ್ಟುಹಬ್ಬದ ಶುಭಾಶಯ ಹೇಳಿ, ದೇವೇಗೌಡರ ಆರೋಗ್ಯ  ವಿಚಾರಿಸಿದರು. ಮಂಡ್ಯದಲ್ಲಿ ನಡೆದ   ರ್ಯಾಲಿಯೊದಲ್ಲಿ ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಮ್ ಹಾಗೂ ಜನತಾದಳ (ಸಂಘ ಪರಿವಾರ) ಎಂದು ಟೀಕಿಸಿದ್ದಕ್ಕಾಗಿ ಕ್ಷಮೆ ಕೇಳಿದರು ಎಂದು ವರದಿಗಳು ತಿಳಿಸಿವೆ. 

10 ನಿಮಿಷ ದೇವೇಗೌಡರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿನ ಸದ್ಯದ ಸ್ಥಿತಿಯ ಕುರಿತು ಸಮಾಲೋಚನೆ ನಡೆಸಿದರು. ದೇಶಾದ್ಯಂತ ನರೇಂದ್ರ ಮೋದಿ ಅವರನ್ನು ಎದುರಿಸಲು ದೇವೇಗೌಡರ ಸಹಕಾರ ಕೋರಿದರು ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಮೋದಿಯವರೂ ಫೋನ್ ಮಾಡಿ ಶುಭ ಕೋರಿದರು. 

Comments 0
Add Comment

    Related Posts

    Ex Mla Refuse Congress Ticket

    video | Friday, April 13th, 2018
    Sujatha NR