ರಾಹುಲ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಸಮಸ್ಯೆ : ಪ್ರಕರಣಕ್ಕೆ ಬಿಗ್ ಟ್ವಿಸ್ಟ್

Rahul Gandhi  Flight Scare
Highlights

ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನವು  ಲ್ಯಾಂಡಿಂಗ್ ಆಗುವ ವೇಳೆ ಸಮಸ್ಯೆಗೆ ಈಡಾಗಿತ್ತು ಎನ್ನುವ ವಿಚಾರಕ್ಕೆ ಇದೀಗ ಬಿಗ್ ಟ್ವಿಸ್ಟ್ ದೊರಕಿದೆ. ಅಂತಹ ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳೇ ಹೇಳಿದ್ದಾರೆ.

ಬೆಂಗಳೂರು : ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನವು  ಲ್ಯಾಂಡಿಂಗ್ ಆಗುವ ವೇಳೆ ಸಮಸ್ಯೆಗೆ ಈಡಾಗಿತ್ತು ಎನ್ನುವ ವಿಚಾರಕ್ಕೆ ಇದೀಗ ಬಿಗ್ ಟ್ವಿಸ್ಟ್ ದೊರಕಿದೆ.
  
ರಾಹುಲ್ ಗಾಂಧಿ ದಿಲ್ಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು ಎನ್ನಲಾಗಿತ್ತು.  ಆದರೆ ಇದೀಗ ಈ ವಿಮಾನದಲ್ಲಿ ಯಾವುದೇ ರೀತಿಯಾದ ತಾಂತ್ರಿಕ ದೋಷ ಕಂಡು ಬಂದಿಲ್ಲ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು  ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕಿ ಅಹಲ್ಯಾ ಹೇಳಿದ್ದಾರೆ.
 
ವಿಮಾನದಲ್ಲಿ ಯಾವುದೇ ರೀತಿಯಾದ ಸಣ್ಣ ತೊಂದರೆಯಾದರೂ ಕೂಡ  ನಮಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ಬರುತ್ತದೆ.  ಆದರೆ ಇಲ್ಲಿಯವರೆಗೆ ಎಟಿಸಿಯಿಂದ ಆಗಲಿ ಅಥವಾ ಪೈಲಟ್’ಗಳಿಂದಾಗಲಿ ನಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಅವರು ಹೇಳಿದ್ದಾರೆ. 

ಹೀಗಾಗಿ ವಿಮಾನ ಸುರಕ್ಷಿತ ಹಾಗೂ ನಿಗದಿತ ಸಮಯಕ್ಕೆ ಲ್ಯಾಂಡ್ ಆಗಿದೆ.  ಯಾವುದೇ ಕ್ಷಣಕ್ಕೂ ಕೂಡ ವಿಮಾನ ಸಂಪರ್ಕವನ್ನು ಕಳೆದುಕೊಂಡಿಲ್ಲ. ಈ ರೀತಿ ಗೊಂದಲ ಆಗಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ. ಅದರ ಬಗ್ಗೆ ದೂರು ಕೊಟ್ಟವರಿಂದ ಈ ಬಗ್ಗೆ ಮಾಹಿತಿಯನ್ನು ಪಡೆಯಬೇಕಿದೆ ಎಂದು ಅಹಲ್ಯಾ ಎಸ್.ಕೆ ಹೇಳಿದ್ದಾರೆ.

ಗುರುವಾರ ಉತ್ತರ ಕನ್ನಡ ಜಿಲ್ಲೆಗೆ ಪ್ರಚಾರ ಮಾಡಲು ರಾಹುಲ್ ತೆರಳಬೇಕಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಯಿಂದ ‘ವಿಟಿ ಎವಿ ಎಚ್’ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಆಗಮಿ ಸಿದ್ದರು. ವಿಮಾನದಲ್ಲಿ ರಾಹುಲ್ ಗಾಂಧಿ, ದೂರುದಾರ ವಿದ್ಯಾರ್ಥಿ, ಭದ್ರತಾ ಸಿಬ್ಬಂದಿ ಸೇರಿದಂತೆ 5 ಜನರು ಇದ್ದರು. ಹುಬ್ಬಳ್ಳಿಯಿಂದ ರಾಹುಲ್ ಅವರು ಹೆಲಿಕಾಪ್ಟರ್ ಮೂಲಕ ಉತ್ತರ ಕನ್ನಡ ಜಿಲ್ಲೆಗೆ ಪ್ರಯಾಣ ಬೆಳೆಸಬೇಕಿತ್ತು. ರಾಹುಲ್ ಬೆಳಗ್ಗೆ 9.15ಕ್ಕೆ ವಿಮಾನದ ಮೂಲಕ ದೆಹಲಿ ಬಿಟ್ಟಿದ್ದರು. 11.45ಕ್ಕೆ ಹುಬ್ಬಳ್ಳಿ ತಲುಪಬೇಕಿತ್ತು. ಆದರೆ 10.45ರ ಸುಮಾರು ವಿಮಾನ ಎಡ ಭಾಗದತ್ತ ವಾಲಲು ಆರಂಭಿಸಿತು.


ವಿಮಾನವು ಎತ್ತರದಿಂದ ಕೆಳಗೆ ಇದ್ದಕ್ಕಿದ್ದಂತೆ ಕುಸಿದಂತಾಯಿತು. ವಿಮಾನ ಅಲುಗಾಡಿತು. ಚಿಟಿಕೆ ಹೊಡೆದ ಶಬ್ದ ಕೂಡ ಶುರುವಾಯಿತು. ಆ ವೇಳೆ ಗಮನಿಸಿದಾಗ ವಿಮಾನದ ಆಟೋ ಪೈಲಟ್ ವಿಧಾನವು ಕೆಲಸ ಮಾಡುತ್ತಿರಲಿಲ್ಲ
ಎಂದು ತಿಳಿದುಬಂತು. ಈ ವೇಳೆ, ಹುಬ್ಬಳ್ಳಿಯಲ್ಲಿ ಮೊದಲು 2 ಬಾರಿ ವಿಮಾನವನ್ನು ಇಳಿಸಲು ಪ್ರಯತ್ನಿಸಲಾಯಿತು. ಸಾಧ್ಯವಾಗಲಿಲ್ಲ.


ಕೊನೆಗೆ ಮೂರನೇ ಬಾರಿ ವಿಮಾನವು ಲ್ಯಾಂಡ್ ಆಯಿತು. ಆದರೆ ಸುಸೂ ತ್ರವಾಗಿ ಲ್ಯಾಂಡ್ ಆಗದೇ ಅಲುಗಾಡುತ್ತ ಹಾಗೂ ವಿಚಿತ್ರ ಶಬ್ದ ಮಾಡುತ್ತ 11.25ಕ್ಕೆ ಭೂಸ್ಪರ್ಶ ಮಾಡಿತ್ತು ಎಂದು ಹೇಳಲಾಗಿತ್ತು. 

 

loader