ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ವಿರುದ್ಧ ಎಫ್ ಬಿಯಲ್ಲಿ ರಾಯಭಾಗ ಮೂಲದ ಪಿಎಸ್ಐ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ.  ಬೆಳಗಾವಿ ಡಿಸಿಐಬಿ ಸಬ್ ಇನ್ಸ್ಪೆಕ್ಟರ್ ಉದ್ದಪ್ಪ ಕಟ್ಟಿಕರ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ.  

ಬೆಳಗಾವಿ (ಮೇ 25): ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ವಿರುದ್ಧ ಎಫ್ ಬಿಯಲ್ಲಿ ರಾಯಭಾಗ ಮೂಲದ ಪಿಎಸ್ಐ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ. ಬೆಳಗಾವಿ ಡಿಸಿಐಬಿ ಸಬ್ ಇನ್ಸ್ಪೆಕ್ಟರ್ ಉದ್ದಪ್ಪ ಕಟ್ಟಿಕರ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ. 

ಸಿಎಂ ಕುಮಾರಸ್ವಾಮಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖಂಡರು, ಬೇರೆ ರಾಜ್ಯದ ಸಿಎಂ, ಮಾಜಿ ಸಿಎಂ ಮುಖಂಡರನ್ನು ದೇಶದ್ರೋಹಿಗಳೆಂದು ಹೀಗಳೆದಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರವನ್ನು ಎಮ್ಮೆ-ಕೋಣಗಳಿಗೆ ಹೋಲಿಕೆ ಮಾಡಿದ್ದಾರೆ. ಜಾತ್ಯಾತೀತರ ಸೋಗಿನಲ್ಲಿ ಜಾತಿವಾದಿಗಳು ಮತ್ತು ಕೋಮುವಾದಿಗಳು ಸರ್ಕಾರ ರಚಿಸುತ್ತಿದ್ದಾರೆ. ಮೂರು ಬಿಟ್ಟ ಅನರ್ಹರಿಗೆ ಅಧಿಕಾರ ಸಿಕ್ಕಿದೆ. ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಚಾರ, ಅನುಭವಿಸೋದು ಜನರ ಗ್ರಹಚಾರ ಎಂದು ಪೋಸ್ಟ್ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಆಸ್ಪದವಾಗಿದೆ.