ಕೃಷ್ಣ ದರ್ಶನ ಮಾಡದಿದ್ದುದು ಒಳ್ಳೆಯದಲ್ಲ : ಮೋದಿಗೆ ಪೇಜಾವರ ಶ್ರೀ ಎಚ್ಚರಿಕೆ

Prime Minister Narendra Modi not to visit udupi Sri krishna mutt
Highlights

ಪ್ರಧಾನಿ ಮೋದಿ ಅವರು ಉಡುಪಿಗೆ ಬಂದೂ ಕೃಷ್ಣ ಮಠಕ್ಕೆ ಬರುವುದಿಲ್ಲ ಎಂದು ತಿಳಿದಾಗ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು, ಇದು ಚುನಾವಣೆ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಎಚ್ಚರಿಸಿದ್ದಾರೆ.

ಉಡುಪಿ :  ಪ್ರಧಾನಿ ಮೋದಿ ಅವರು ಉಡುಪಿಗೆ ಬಂದೂ ಕೃಷ್ಣ ಮಠಕ್ಕೆ ಬರುವುದಿಲ್ಲ ಎಂದು ತಿಳಿದಾಗ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು, ಇದು ಚುನಾವಣೆ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಎಚ್ಚರಿಸಿದ್ದಾರೆ. ಅವರು ಪ್ರಧಾನಿ ಅವರಿಗೆ ಸೋಮವಾರವೇ ಪತ್ರ ಕಳುಹಿಸಿದ್ದು, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಕೃಷ್ಣ ಮಠಕ್ಕೆ ಬಾರದೇ ಇದ್ದುದನ್ನು ಬಿಜೆಪಿ ಬಲವಾಗಿ ಆಕ್ಷೇಪಿಸಿತ್ತು.


ಈಗ ಮೋದಿ ಬಾರದಿದ್ದರೆ ಬಿಜೆಪಿಯ ಮೇಲೆ ಕಳಂಕ ಬರುತ್ತದೆ. ಆದ್ದರಿಂದ ಮೋದಿ ಅವರು ಕೃಷ್ಣ ಮಠಕ್ಕೆ ಭೇಟಿ ನೀಡಬೇಕು ಎಂದು ಆಗ್ರಹಿಸಿದ್ದರು. ಮೋದಿ ಕೃಷ್ಣ ಮಠಕ್ಕೆ ಬಂದರೆ ಮುಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗೆ ಸಹಾಯಕ ವಾಗುತ್ತದೆ.

ಉಡುಪಿಯ ಕೃಷ್ಣ ಕೂಡ ಮೋದಿ ಅವರ ತನ್ನೂರಾದ ದ್ವಾರಕೆಯಿಂದಲೇ ಉಡುಪಿಗೆ ಬಂದವ. ದ್ವಾರಕಾಧೀಶನೇ ಮೋದಿ ಕಡೆಗೆ ಇದ್ದರೆ ಬಿಜೆಪಿಯ ರಥ ವಿಜಯದತ್ತ ಸಾಗುತ್ತದೆ ಎಂದು ಹೇಳಿದ್ದರು. 
ಮಂಗಳವಾರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಮೋದಿ ಬಂದಿಲ್ಲವೆಂದು ಬೇಸ ರವಿಲ್ಲ. ಈ ಬಾರಿ ಮಠಕ್ಕೆ  ಬರುವಂತೆ ಪತ್ರ ಬರೆದಿದ್ದೆ, ಚುನಾವಣೆ ಸಂದರ್ಭ ದೇವರ ಅನುಗ್ರಹವಾಗುತ್ತದೆ ಎಂದಿದ್ದೆ ಎಂದರು. ಈ ನಡುವೆ, ಮಠಕ್ಕೆ ಮೋದಿ ಮುಂದಿನ ದಿನಗಳಲ್ಲಿ ಬರಬಹುದು ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಹೇಳಿದರು.

loader