ವಿಧಾನಸೌಧ ತಲುಪಿದ ಪ್ರತಾಪ್ ಗೌಡಗೆ ಡಿಕೆಶಿ ಮಾಡಿದ್ದೇನು?

karnataka-assembly-election-2018 | Saturday, May 19th, 2018
Suvarna Web Desk
Highlights
 • ವಿಧಾನಸೌಧ ತಲುಪಿದ ‘ನಾಪತ್ತೆಯಾಗಿದ್ದ’ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ
 • ವಿಧಾನಸೌಧದ ಪ್ರವೇಶ ದ್ವಾರದಲ್ಲೇ ಮುಖಾಮುಖಿಯಾದ ಡಿಕೆಶಿ- ಪ್ರತಾಪ್ ಗೌಡ 

ಬೆಂಗಳೂರು [ಮೇ.19]: ರಾಜಕೀಯ ಹೈಡ್ರಾಮಾಗಲು ಆರಂಭವಾದ ದಿನಗಳಿಂದ ನಾಪತ್ತೆಯಾಗಿದ್ದ ಮಸ್ಕಿಯ ಕಾಂಗ್ರೆಸ್‌ ಶಾಸಕ ಪ್ರತಾಪ್ ಗೌಡ ವಿಧಾನಸೌಧ ತಲುಪಿದ್ದಾರೆ.

 ವಿಧಾನಸೌಧ ತಲುಪುತ್ತಿದ್ದಂತೆ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್ ಮುಖಾಮುಖಿಯಾಗಿದ್ದಾರೆ. ಈ ಸಂದರ್ಭದಲ್ಲಿ ಡಿಕೆಶಿ ಅವರನ್ನು ಅಡ್ಡಗಟ್ಟಿದ್ದಾರೆ ಹಾಗೂ ಜೇಬಿನಲ್ಲಿ ವಿಪ್ ಇಟ್ಟಿದ್ದಾರೆಂದು ಹೇಳಲಾಗಿದೆ.

ಶಾಸಕ ಪ್ರತಾಪ್ ಗೌಡ ವಿಧಾನಸಭೆ ತಲುಪಿದ್ದಾರೆ, ಅವರ ಬೆಂಬಲ ಕಾಂಗ್ರೆಸ್‌ಗೆ ಇದೆ ಎಂದು ಡಿಕೆಶಿ ಈ ಸಂದರ್ಭದಲ್ಲಿ ಹೇಳಿದ್ದಾರೆ.  

ವಿಶೇಷವೆಂದರೆ, ವಿಧಾನಸಭಾ ಸಭಾಂಗಣ ಪ್ರವೇಶಿಸಿದ ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ ಶಾಸಕರ ಜೊತೆ ಹೋಗಿ ಕೂತಿದ್ದಾರೆ. ಮಧ್ಯಾಹ್ನ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಪ್ರತಾಪ್ ಗೌಡ ಯಾರಿಗೆ ಬೆಂಬಲ ಸೂಚಿಸುತ್ತಾರೆ ಎಂಬುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ.  

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Sayed Isthiyakh