ನಾನು ಉಡುಪಿಯ ಪಿಎಂ, ಭಾಷಣದ ಪಿಎಂ ಲೆಕ್ಕಕ್ಕಿಲ್ಲ

Pramod  Madhwaraj Lashes out Narendra Modi
Highlights

ಮೇ. 1 ರಂದು ಉಡುಪಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿಯವರು ತುಳುವಿನಲ್ಲಿ ಭಾಷಣ ಆರಂಭಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಉಡುಪಿ ವಿಧಾನಸಭೆ ಕ್ಷೇತ್ರದ ಚುನಾವಣಾ ಕಣ ರಂಗೇರಿದ್ದು ಕಾಂಗ್ರೆಸ್'ನಿಂದ ಹಾಲಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿಯಿಂದ ಕೆ. ರಘುಪತಿ ಭಟ್ ಹಾಗೂ ಜೆಡಿಎಸ್ ಪಕ್ಷದಿಂದ ಗಂಗಾಧರ್ ಬಂಡಾರಿ ಅಖಾಡಕ್ಕಿಳಿದಿದ್ದಾರೆ. 

ಉಡುಪಿ(ಮೇ.03): ದೆಹಲಿಯ ಪಿಎಂ 5ವರ್ಷಕ್ಕೆಮ್ಮೆ  ಬಂದು ಭಾಷಣ ಮಾಡಿ ಹೋಗುತ್ತಾರೆ ಆದರೆ ಭಾಷಣ ಕೇಳಿದ ಜನ ಮತ ಚಲಾಯಿಸದೋ ಈ ಉಡುಪಿಯ ಪಿಎಂಗೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ನರೇಂದ್ರ ಮೋದಿಯ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಅವರು, ಪ್ರಧಾನಿಯವರ ಭಾಷಣ ಕೇಳಿ ಹಾಕಿದವರು ಮತ ಚಲಾಯಿಸುತ್ತಾರೆ. ಬಿಜೆಪಿಯ ಸಾಂಪ್ರದಾಯಿಕ ಮತಗಳು ನನ್ನ ಪಾಲಿಗೆ ಬರುತ್ತವೆ. ಇನ್ನೊಂದು ವರ್ಗ ಪಕ್ಷ ಹಾಗೂ ಅಭಿವೃದ್ಧಿ ನೋಡಿ  ಮತ ಹಾಕ್ತಾರೆ ಎಂದರು.
ಮೇ. 1 ರಂದು ಉಡುಪಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿಯವರು ತುಳುವಿನಲ್ಲಿ ಭಾಷಣ ಆರಂಭಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಉಡುಪಿ ವಿಧಾನಸಭೆ ಕ್ಷೇತ್ರದ ಚುನಾವಣಾ ಕಣ ರಂಗೇರಿದ್ದು ಕಾಂಗ್ರೆಸ್'ನಿಂದ ಹಾಲಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿಯಿಂದ ಕೆ. ರಘುಪತಿ ಭಟ್ ಹಾಗೂ ಜೆಡಿಎಸ್ ಪಕ್ಷದಿಂದ ಗಂಗಾಧರ್ ಬಂಡಾರಿ ಅಖಾಡಕ್ಕಿಳಿದಿದ್ದಾರೆ. ಮೂವರು ಪ್ರಮುಖ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಕ್ಷೇತ್ರದಲ್ಲಿ 1.32.212 ಮತದಾರರಿದ್ದಾರೆ.

loader