ಗದಗ (ಮೇ. 07):  ಬಿಜೆಪಿ ವಿರೋಧ ಮಾಡುವವರು ಮುಧೋಳ ನಾಯಿ ನೋಡಿ ಕಲಿಯಿರಿ ಮೋದಿ ಹೇಳಿಕೆಗೆ  ನಟ ಪ್ರಕಾಶ್ ರೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮೋದಿ ಮುಧೋಳ ನಾಯಿ ಬಗ್ಗೆ ಮಾತಾಡ್ತಾರೆ.  ಬಿಜೆಪಿ ವಿರೋಧಿಗಳು ಮುಧೋಳ ನಾಯಿ ನೋಡಿ ಕಲಿಬೇಕು ಅಂತಾರೆ.  ಸೈನ್ಯದಲ್ಲಿ ಮುಧೋಳ ನಾಯಿಗೆ ಕೆಲಸ ಕೊಡ್ತಾರಂತೆ. ರೀ ಸ್ವಾಮಿ ರಾಜ್ಯದ ಚುನಾವಣೆಯಲ್ಲಿ ನಾಯಿ ಮತ ಹಾಕಲ್ಲ. ಜನ ಮತ ಹಾಕ್ತಾರೆ. ಇಲ್ಲಿನ ನಾಯಿಗಳು ಜನರ ಪ್ರೀತಿ, ಊಟಕ್ಕಾಗಿ ಮನೆ ಕಾಯುತ್ತವೆ.  ಪ್ರಧಾನಿ ಸ್ಥಾನಕ್ಕೆ ಗೌರವ ಕೊಡಿ. ನಾಯಿಗಿಂತ ಕಡೆಯಾದವಾ ನಾವೂ ಅಂತ ಪ್ರಕಾಶ್ ರೈ  ಪ್ರಶ್ನಿಸಿದ್ದಾರೆ. 

ಪ್ರಧಾನಿ ಮಹದಾಯಿ ಹೇಳಿಕೆ ವಿಚಾರವಾಗಿ ಮಾತನಾಡುತ್ತಾ,  ಮತ ಹಾಕಿ ನೀರು ಕೊಡ್ತೀವಿ ಅಂತ ಪ್ರಧಾನಿ ಬ್ಲ್ಯಾಕ್ ಮೇಲ್ ಮಾಡ್ತೀರಾ? ಮೂರು ವರ್ಷದಿಂದ ರೈತರು ಹೋರಾಟ ಮಾಡಿದ್ದಾರೆ ಒಂದು ಬಾರಿ ಮಾತಾಡಿಲ್ಲ.  ಸಾಕಷ್ಟು ಬಾರಿ ರಾಜ್ಯಕ್ಕೆ ಬಂದರೂ ಮಾತಾಡಿಲ್ಲ. ಯಾಕೆ ಎಂದು ಪ್ರಶ್ನಿಸಿದ್ದಾರೆ. 

ನಾಲ್ಕು ಪಕ್ಷೇತರ ಶಾಸಕರ ಪಡೆದು ಗೋವಾದಲ್ಲಿ ಬಿಜೆಪಿ ಸರ್ಕಾರ ಮಾಡಿದೆ. ರಾಜ್ಯಕ್ಕೆ ನೀರು ಕೊಟ್ರೆ ಗೋವಾ ಸರ್ಕಾರ ಬೀಳುತ್ತೆ ಅಂತ ಸೋನಿಯಾ ವಿರುದ್ಧ ಮಾತಾಡ್ತಾರೆ. ಸೋನಿಯಾ ಸರ್ಕಾರ ವಿಪಕ್ಷ ನಾಯಕಿ ಅಷ್ಟೇ ಎಂದು ಪ್ರಕಾಶ್ ರೈ ಹೇಳಿದ್ದಾರೆ.