ಪ್ರಹ್ಲಾದ್ ಬಾಬು ಜಯನಗರ ವಿಧಾನಸಭಾ ಬಿಜೆಪಿ ಅಭ್ಯರ್ಥಿ

Prahlad babu Jayanagar BJP Candidate
Highlights

ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಿದ್ದು, ಶಾಸಕ  ದಿ.ವಿಜಯ್ ಕುಮಾರ್ ಅವರ ಸೋದರ ಪ್ರಹ್ಲಾದ್ ಬಾಬು ಕಣಕ್ಕಿಳಿಯಲಿದ್ದಾರೆ. 

ಬೆಂಗಳೂರು(ಮೇ.22): ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಪ್ರಹ್ಲಾದ್ ಬಾಬು ಅವರನ್ನು ಆಯ್ಕೆ ಮಾಡಲಾಗಿದೆ. 
ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಿದ್ದು, ಶಾಸಕ  ದಿ.ವಿಜಯ್ ಕುಮಾರ್ ಅವರ ಸೋದರ ಪ್ರಹ್ಲಾದ್ ಬಾಬು ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್'ನಿಂದ ಸೌಮ್ಯರೆಡ್ಡಿ ಸ್ಪರ್ಧಿಸಿದ್ದರೆ ಸಾಮಾಜಿಕ ಹೋರಾಟಗಾರ ರವಿಕೃಷ್ಣ ರೆಡ್ಡಿ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ.

ಜೂನ್ 11ರಂದು ಮತದಾನ  ಜೂನ್ 13ಕ್ಕೆ ಮತ ಎಣಿಕೆ ನಡೆಯಲಿದೆ. ಪ್ರಚಾರ ಮಾಡುವ ಸಂದರ್ಭದಲ್ಲಿ ಅನಾರೋಗ್ಯಕ್ಕೀಡಾಗಿ ಜಯನಗರ ಶಾಸಕ ಬಿ.ಎನ್.ವಿಜಯ್ ಕುಮಾರ್ ಮೃತಪಟ್ಟ ಕಾರಣ ಚುನಾವಣೆ ರದ್ದುಗೊಂಡಿತ್ತು. ರಾಜ್ಯ ಚುನಾವಣಾ ಫಲಿತಾಂಶದಲ್ಲಿ  ಬಿಜೆಪಿ 104, ಕಾಂಗ್ರೆಸ್ 78 ಹಾಗೂ ಜೆಡಿಎಸ್ 37 ಹಾಗೂ ಇತರರು 3 ಸ್ಥಾನಗಳಲ್ಲಿ ಜಯಗಳಿಸಿದ್ದರು. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುತ್ತಿದ್ದು ಮೇ.23 ಜೆಡಿಎಸ್'ನಿಂದ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಪತಿ ಪತ್ನಿಯರಲ್ಲಿ ಒಬ್ಬರು ಮೃತಪಟ್ಟರೆ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡುವುದು ಸಂಪ್ರದಾಯ. ಅಣ್ಣ ಮೃತಪಟ್ಟರೆ ತಮ್ಮನಿಗೆ ನೀಡಿರುವುದು ಇದು ಮೊದಲೆ ?  ಗೊತ್ತಿದ್ದರೆ ಓದುಗರು ತಿಳಿಸಬಹುದು.

 

loader