ಬೆಂಗಳೂರು (ಏ.24): ಈ ಬಾರಿ ಬಿಜೆಪಿಯಲ್ಲಿ ಯಡಿಯೂರಪ್ಪ, ಅನಂತಕುಮಾರ್ ಹೊರತುಪಡಿಸಿ ಅತಿ ಹೆಚ್ಚು ಮಾತು ನಡೆದಿದ್ದು ಸಂತೋಷ್ ಜಿ ಅವರದ್ದು. ಅಶೋಕ್ ವಿರೋಧದ ಹೊರತಾಗಿಯೂ  ರಾಜರಾಜೇಶ್ವರಿ ನಗರದಿಂದ ತನ್ನ ಶಿಷ್ಯ ಮುನಿರಾಜು ಗೌಡರಿಗೆ   ಟಿಕೆಟ್ ಕೊಡಿಸಿದ ಸಂತೋಷ್, ಕಲಘಟಗಿಯಿಂದ ಶೆಟ್ಟರ್, ಜೋಶಿ, ಯಡಿಯೂರಪ್ಪ ಎಷ್ಟೇ ವಿರೋಧಿಸಿದರೂ ಮಹೇಶ್  ತೆಂಗಿನಕಾಯಿಗೆ ಟಿಕೆಟ್ ಕೊಡಿಸಿದ್ದಾರೆ.

ಬೆಳ್ತಂಗಡಿಯಿಂದ ಶೋಭಾ ಕರಂದ್ಲಾಜೆ ಅವರ ಎಷ್ಟೇ ವಿರೋಧವಿದ್ದರೂ ಹರೀಶ ಪೂಂಜಾ ಎಂಬ ಯುವಕನಿಗೆ ಸಂತೋಷ್ ಟಿಕೆಟ್ ಕೊಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಹೇಳುವ ಪ್ರಕಾರ ಯಡಿಯೂರಪ್ಪ, ಅನಂತಕುಮಾರ್ ಬಿಟ್ಟರೆ ಮೋದಿ ಮತ್ತು ಶಾ ಎದುರು ಕುಳಿತು ಮಾತನಾಡುವ ಸಾಮರ್ಥ್ಯ ಇರೋದು ಕರ್ನಾಟಕದಿಂದ  ಸಂತೋಷ್‌ಗೆ ಮಾತ್ರ.
 

-ಪ್ರಶಾಂತ್ ನಾತು

ರಾಜಕೀಯ ಸುದ್ದಿಗಳಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ