ಬೆಂಗಳೂರು (ಮೇ. 22): ಗೆದ್ದ ಎತ್ತಿನ ಬಾಲ ಹಿಡಿಯುವವರಲ್ಲಿ ಮಾಧ್ಯಮಗಳು ಕೂಡ ಹಿಂದೆ ಇಲ್ಲ. ದೇವೇಗೌಡರು ಪತ್ರಿಕಾಗೋಷ್ಠಿ ಕರೆದು ಬನ್ನಿ ಬನ್ನಿ ಎಂದರೂ ತಿರುಗಿ ನೋಡದ ದಿಲ್ಲಿ ಮಾಧ್ಯಮಗಳು ಕುಮಾರಸ್ವಾಮಿ ನಿನ್ನೆ ಬಂದಾಗ ಮಾತ್ರ ಫುಲ್ ಕೋರಮ್‌ನಲ್ಲಿದ್ದವು.

ರಾಷ್ಟ್ರ ರಾಜಕಾರಣದಲ್ಲಿ ಮಹತ್ವ ಕಳೆದುಕೊಂಡಿರುವ ಮಾಯಾವತಿ ಕೂಡ ಕುಮಾರಸ್ವಾಮಿ ತನ್ನ ಮನೆಗೆ ಬರುತ್ತಾರೆ ಬನ್ನಿ ಎಂದು ಮಾಧ್ಯಮಗಳಿಗೆ ಆಹ್ವಾನ ಕೊಟ್ಟಿದ್ದರು. ಕುಮಾರಸ್ವಾಮಿ ಆಪ್ತರು ಹೇಳುವ ಪ್ರಕಾರ ದೇವೇಗೌಡರ ಕುಟುಂಬ ಏನೇ ಗಾಂಧಿ ಕುಟುಂಬದ ಜೊತೆ ಮಾತನಾಡೋದಿದ್ದರೂ ಗುಲಾಂ ನಬಿ ಮುಖಾಂತರವಂತೆ. 

-ಪ್ರಶಾಂತ್ ನಾತು 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ