Asianet Suvarna News Asianet Suvarna News

ರೆಸಾರ್ಟ್'ನಲ್ಲಿ ಹೈಡ್ರಾಮ : ಶಾಸಕನನ್ನು ತಡೆದ ಪೊಲೀಸರು

ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿ 104 ಸ್ಥಾನಗಳನ್ನು ಪಡೆದಿದೆ. ರಾಜ್ಯಪಾಲರ ಆಹ್ವಾನದ ಮೇರೆಗೆ ಇಂದು ಬೆಳಿಗ್ಗೆ ಬಿ.ಎಸ್. ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ್ದು ಬಹುಮತ ಸಾಬೀತಿಗೆ 15 ದಿನಗಳ ಕಾಲಾವಕಾಶ ಕೇಳಿದ್ದಾರೆ. 

Political High Drama at Eagleton Resort

ಬಿಡದಿ(ಮೇ.17): ಕುದುರೆ ವ್ಯಾಪಾರದ ಭೀತಿಯಲ್ಲಿ ಕಾಂಗ್ರೆಸ್ ಶಾಸಕರು ಉಳಿದುಕೊಂಡಿರುವ ಬಿಡದಿಯ ಈಗಲ್'ಟನ್ ರೆಸಾರ್ಟ್'ನಲ್ಲಿ ಇಂದು ಹೈಡ್ರಾಮ ನಡೆದಿದೆ. ಅನಾರೊಗ್ಯದ ಕಾರಣ ಹುಮ್ನಾಬಾದ್ ಶಾಸಕ ರಾಜಶೇಖರ್ ಪಾಟೀಲ್  ರೆಸಾರ್ಟ್'ನಿಂದ ಹೊರ ತೆರಳುತ್ತಿದ್ದಾಗ ಪೊಲೀಸರು ಶಾಸಕರ ಕಾರನ್ನು ತಡೆದಿದ್ದಾರೆ.
ಸಂಸದ ಡಿ.ಕೆ.ಸುರೇಶ್ ಅವರಿಗೆ ಹೇಳಿದರೆ ಮಾತ್ರ ಬಿಡುತ್ತೇವೆ ಎಂದು ಪೊಲೀಸರು ರೆಸಾರ್ಟ್'ನಿಂದ ಹೊರಹೋಗಲು ಬಿಡಲಿಲ್ಲ. 10 ನಿಮಿಷದ ಬಳಿಕ ಶಾಸಕರಾದ  ಕೆ.ಜೆ. ಜಾರ್ಜ್ ಹಾಗೂ ಪ್ರಿಯಾಂಕ್ ಖರ್ಗೆ ಗೇಟಿನ ಬಳಿ ಆಗಮಿಸಿ ಪಾಟೀಲರ ಜೊತೆ ಮಾತುಕತೆ ನಡೆಸಿದರು. ನನಗೆ ಅನಾರೋಗ್ಯವಿದೆ ಆಸ್ಪತ್ರೆಗೆ ಹೋಗುತ್ತಿದ್ದೇನೆ ಸ್ಪಷ್ಟನೆ ನೀಡಿದರು ಎನ್ನಲಾಗಿದೆ.
ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿ 104 ಸ್ಥಾನಗಳನ್ನು ಪಡೆದಿದೆ. ರಾಜ್ಯಪಾಲರ ಆಹ್ವಾನದ ಮೇರೆಗೆ ಇಂದು ಬೆಳಿಗ್ಗೆ ಬಿ.ಎಸ್. ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ್ದು ಬಹುಮತ ಸಾಬೀತಿಗೆ 15 ದಿನಗಳ ಕಾಲಾವಕಾಶ ಕೇಳಿದ್ದಾರೆ. ಕುದುರೆ ವ್ಯಾಪಾರದ ಭೀತಿಯಲ್ಲಿ ಕಾಂಗ್ರೆಸ್ - ಬಿಜೆಪಿ ಶಾಸಕರು ಬಿಡದಿ ಹಾಗೂ ಕೊಚ್ಚಿ ರೆಸಾರ್ಟ್'ಗೆ ತರಳಿದ್ದಾರೆ. ರಾಜಕೀಯ ಜಂಜಾಟಗಳು ಮತ್ತಷ್ಟು ತೀವ್ರಗೊಂಡಿವೆ. 
    

Follow Us:
Download App:
  • android
  • ios