ಇಂದು ಮೂರು ಕಡೆ ಪ್ರಧಾನಿ ಮೋದಿ ಚುನಾವಣಾ ರ್ಯಾಲಿ

PM set to address rallies in Gulbarga, Ballari and Bengaluru today
Highlights

ಮೊನ್ನೆಯಷ್ಟೇ ಚಾಮರಾಜನಗರ, ಉಡುಪಿ, ಬೆಳಗಾವಿ ಜಿಲ್ಲೆಗಳಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಇಂದು ಬೆಳಗ್ಗೆ 11ಕ್ಕೆ ಕಲಬುರಗಿ, ಮಧ್ಯಾಹ್ನ 3ಕ್ಕೆ ಬಳ್ಳಾರಿ, ಸಂಜೆ 6ಕ್ಕೆ ಬೆಂಗಳೂರಿನ ಕೆಂಗೇರಿಯಲ್ಲಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ. 

ಬೆಂಗಳೂರು : ಮೊನ್ನೆಯಷ್ಟೇ ಚಾಮರಾಜನಗರ, ಉಡುಪಿ, ಬೆಳಗಾವಿ ಜಿಲ್ಲೆಗಳಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಇಂದು ಬೆಳಗ್ಗೆ 11ಕ್ಕೆ ಕಲಬುರಗಿ, ಮಧ್ಯಾಹ್ನ 3ಕ್ಕೆ ಬಳ್ಳಾರಿ, ಸಂಜೆ 6ಕ್ಕೆ ಬೆಂಗಳೂರಿನ ಕೆಂಗೇರಿಯಲ್ಲಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರ ಸಭೆಗಳನ್ನು ಪರಿಷ್ಕರಿಸಲಾಗಿದ್ದು, ಇನ್ನೂ ಒಂದು ದಿನ ಹೆಚ್ಚುವರಿಯಾಗಿ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮೊದಲು ಐದು ದಿನಗಳನ್ನು ರಾಜ್ಯ ಚುನಾವಣಾ ಪ್ರಚಾರಕ್ಕಾಗಿ ನಿಗದಿಪಡಿಸಲಾಗಿತ್ತು. ಇದೀಗ ಮತ್ತೊಂದು ದಿನ ಹೆಚ್ಚುವರಿಯಾಗಿ ಪ್ರಚಾರ ನಡೆಸಲು ಮೋದಿ ಅವರು ಒಪ್ಪಿಕೊಂಡಿದ್ದಾರೆ. 

ಇಂದು ಮೋದಿ ಅವರು ಕಲಬುರ್ಗಿ, ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಸಭೆಗಳನ್ನು  ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಏ.5ರಂದು ತುಮಕೂರು, ಗದಗ, ಶಿವಮೊಗ್ಗ ಮತ್ತು ಮಂಗಳೂರು, ಏ.6ರಂದು  ಚಿತ್ರದುರ್ಗ, ರಾಯಚೂರು, ಜಮಖಂಡಿ (ಬಾಗಲಕೋಟೆ ಜಿಲ್ಲೆ), ಹುಬ್ಬಳ್ಳಿ, ಏ.8ರಂದು ವಿಜಯಪುರ,  ಕೊಪ್ಪಳ, ಬೆಂಗಳೂರು, ಕೊನೆಯ ದಿನ ಏ.9ರಂದು ಬಂಗಾರಪೇಟೆ (ಕೋಲಾರ ಜಿಲ್ಲೆ), ಚಿಕ್ಕಮಗಳೂರು, ಬೆಳಗಾವಿ ಮತ್ತು ಬೀದರ್‌ನಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.

loader