ದೇವೇಗೌಡರು ಕರ್ನಾಟಕದ ಪುಣ್ಯ ಭೂಮಿಯ ಮಗ, ರೈತನ ಮಗ.ಗೌಡರು ಮನೆಗೆ ಬಂದಾಗಲೆಲ್ಲಾ ಬಾಗಿಲವರೆಗೂ ಹೋಗಿ ಸ್ವಾಗತಿಸುವೆ. ಮಾತುಕತೆ ಮುಗಿದ ನಂತರ ನಾನೇ ಹೋಗಿ ಗೌಡರನ್ನು ಕಾರಿಗೆ ಹತ್ತಿಸುವೆ. ಯಾವುದೇ ರೀತಿ ರಾಜಕಾರಣ ಆದರೂ ಸರಿ ಹಿರಿಯರನ್ನು ನಿಂದಿಸಬಾರದು.
ಉಡುಪಿ(ಮೇ.01): ಚುನಾವಣಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ಉಡುಪಿಯ ಭಾಷಣದಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರನ್ನು ಹೊಗಳಿದ್ದಾರೆ.
ನಿನ್ನೆಯಷ್ಟೆ ದೇವೇಗೌಡರು ತಮ್ಮ ಪುತ್ರ ಜೆಡಿಎಸ್ ಕಾರ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ಜೊತೆ ಹೋದರೆ ಕುಟುಂಬದಿಂದ ಬಹಿಷ್ಕಾರ ಹಾಕುವುದಾಗಿ ರಾಷ್ಟ್ರೀಯ ಸುದ್ದಿವಾಹಿನಿಗೆ ಸಂದರ್ಶನ ನೀಡಿದ್ದರು. ಇದಾದ 24 ಗಂಟೆಯೊಳಗೆ ದೇವೇಗೌಡರನ್ನು ಮೋದಿ ಹಾಡಿ ಹೊಗಳಿ ಜೆಡಿಎಸ್ ವರಿಷ್ಠರನ್ನು ಕಾಂಗ್ರೆಸಿಗರು ಅವಮಾನಿಸುತ್ತಿದ್ದಾರೆ ಎಂದಿದ್ದಾರೆ.
'ದೇವೇಗೌಡರು ಕರ್ನಾಟಕದ ಪುಣ್ಯ ಭೂಮಿಯ ಮಗ, ರೈತನ ಮಗ.ಗೌಡರು ಮನೆಗೆ ಬಂದಾಗಲೆಲ್ಲಾ ಬಾಗಿಲವರೆಗೂ ಹೋಗಿ ಸ್ವಾಗತಿಸುವೆ. ಮಾತುಕತೆ ಮುಗಿದ ನಂತರ ನಾನೇ ಹೋಗಿ ಗೌಡರನ್ನು ಕಾರಿಗೆ ಹತ್ತಿಸುವೆ. ಯಾವುದೇ ರೀತಿ ರಾಜಕಾರಣ ಆದರೂ ಸರಿ ಹಿರಿಯರನ್ನು ನಿಂದಿಸಬಾರದು. ರಾಷ್ಟ್ರದ ಹಿರಿಯ ರಾಜಕಾರಣಿ ದೇವೇಗೌಡರಿಗೆ ಅಪಮಾನ ಮಾಡುತ್ತೀರಾ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
'ಈ ರೀತಿ ಕಾಂಗ್ರೆಸ್, ಅಹಂಕಾರಿ ವ್ಯಕ್ತಿಗಳು ಕರ್ನಾಟಕಕ್ಕೆ ಮಾರಕ. ಕರ್ನಾಟಕದ ಪುಣ್ಯ ಭೂಮಿಯ ಮಗ. ರಾಜಕೀಯದಲ್ಲಿ ಸಂಸ್ಕಾರ ಮುಖ್ಯ.ಆದರೆ ರಾಷ್ಟ್ರದ ಹಿರಿಯ ರಾಜಕಾರಣಿ ದೇವೇಗೌಡರಿಗೆ ಕಾಂಗ್ರೆಸ್'ನವರು ಅಪಮಾನ ಮಾಡುತ್ತಿದ್ದಾರೆ' ಎಂದು ಕಾಂಗ್ರೆಸ್ ನಾಯಕರ ಧೋರಣೆಯನ್ನು ಟೀಕಿಸಿದ್ದಾರೆ.

Last Updated 1, May 2018, 5:50 PM IST