Asianet Suvarna News Asianet Suvarna News

ಮಲೆನಾಡು ಮತದಾರರೆದುರು ಕಾಂಗ್ರೆಸ್ ವಿರುದ್ಧ ಅಡಕೆ ಅಸ್ತ್ರ

ಅಡಕೆ ಬೆಳೆ ಎದುರಿಸುತ್ತಿರುವ ಸಮಸ್ಯೆಗೂ ಕಾಂಗ್ರೆಸ್ ಕಾರಣವಾಗಿದ್ದು, ಅಡಕೆ ಆರೋಗ್ಯಕ್ಕೆ ಹಾನಿಕರ ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದೇ ಯುಪಿಎ ಸರ್ಕಾರ ಎಂದು ಪ್ರಧಾನಿ ಮೋದಿ ತರಾಟೆಗೆ ತೆಗೆದುಕೊಂಡರು. 

PM Modi Slams UPA Govt About Areca

ಶಿವಮೊಗ್ಗ/ಮಂಗಳೂರು: ಅಡಕೆ ಬೆಳೆ ಎದುರಿಸುತ್ತಿರುವ ಸಮಸ್ಯೆಗೂ ಕಾಂಗ್ರೆಸ್ ಕಾರಣವಾಗಿದ್ದು, ಅಡಕೆ ಆರೋಗ್ಯಕ್ಕೆ ಹಾನಿಕರ ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದೇ ಯುಪಿಎ ಸರ್ಕಾರ ಎಂದು ಪ್ರಧಾನಿ ಮೋದಿ ತರಾಟೆಗೆ ತೆಗೆದುಕೊಂಡರು.

ಶಿವಮೊಗ್ಗ ಮತ್ತು ಮಂಗಳೂರಲ್ಲಿ ಶನಿವಾರ ಪ್ರಚಾರ ಸಭೆಗಳಲ್ಲಿ ಅಡಕೆ ವಿಷಯ ಪ್ರಸ್ತಾಪಿಸಿದ ಅವರು, ಮಲೆ ನಾಡು ಮತ್ತು ಕರಾವಳಿ ಜಿಲ್ಲೆಗಳ ಪ್ರಮುಖ ಬೆಳೆ ಅಡಕೆಯ ಬಗ್ಗೆ ಪ್ರಸ್ತಾಪಿಸಿದರು. ಕಾಂಗ್ರೆಸ್‌ನವರ ಬಳಿ ಯಾವ ಸಮಸ್ಯೆಗೂ ಪರಿಹಾರ ಇಲ್ಲ. ಗಾಯದ ಮೇಲೆ ಉಪ್ಪು ಸುರಿಯುವ ಕೆಟ್ಟ ಅಭ್ಯಾಸವಿದೆ. ದೇಶದ ಅಡಕೆ ಉತ್ಪಾದನೆಯ ಅರ್ಧದಷ್ಟು ಇಲ್ಲಿ ಆಗು ತ್ತದೆ. ನನಗೂ ಅಡಕೆಯ ಹಾರವನ್ನು ಹಾಕಿ ಸ್ವಾಗತಿಸಲಾಯಿತು.  

ಅಡಕೆ ಬೆಳೆಗಾರರಿಗೆ ಸ್ವಲ್ಪ ವ್ಯತ್ಯಾಸವಾದರೆ ಎಷ್ಟು ತೊಂದರೆ ಯಾಗುತ್ತದೆ ಅರ್ಥ ಮಾಡಿಕೊಳ್ಳಿ. ಯಡಿಯೂರಪ್ಪ ಅವರು ಈ ಬಗ್ಗೆ  ಹೋರಾಟ ಆರಂಭಿಸಿದಾಗ ಯು ಟರ್ನ್ ಹೊಡೆದ ಯುಪಿಎ ಅಡಕೆ ಬಗ್ಗೆ ಯೋಚಿಸಲು ಆರಂಭಿ ಸಿತು ಎಂದು ಟೀಕಿಸಿದರು. ಇದೇ ವೇಳೆ  ಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಅಡಕೆ ರೈತರ ಹಿತ ಕಾಪಾಡಲು ಪ್ರಯತ್ನಿಸಲಿದ್ದು, ಯೋಗ್ಯ ಪರಿಹಾರ ದೊರಕಿಸಿಕೊಡಲಿದೆ ಎಂದು ಭರವಸೆ ನೀಡಿದರು. ಬಿಜೆಪಿ ಪ್ರಣಾಳಿಕೆಯಲ್ಲಿ ಅಡಕೆ ಬೆಳೆಗಾರರನ್ನು ಪ್ರಸ್ತಾಪಿಸಿರುವು ದರ ಬಗ್ಗೆ ಉಲ್ಲೇಖಿಸಿದ ಅವರು, ಈ ಬಗ್ಗೆ ಯಡಿಯೂ ರಪ್ಪ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು. 

Follow Us:
Download App:
  • android
  • ios