ಕರ್ನಾಟಕದಲ್ಲಿ ನನಸಾಯ್ತು ಕಾಂಗ್ರೆಸ್ ಮುಕ್ತ ಕನಸು : ಜಾವಡೇಕರ್

PM Modi Congress Free India dreams Comes True In Karnataka
Highlights

ಬಿಜೆಪಿಯ ‘ಕಾಂಗ್ರೆಸ್ ಮುಕ್ತ’ ಭಾರತ ಎಂಬ ಸಂಕಲ್ಪವು ಕರ್ನಾಟಕದಲ್ಲಿ ಸಹ ಈಡೇರಿದೆ ಎಂದು ಕರ್ನಾಟಕ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. 

ಬೆಂಗಳೂರು [ಮೇ 20] : ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ.  ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರಿ ವಹಿಸಿಕೊಳ್ಳುತ್ತಿದ್ದಾರೆ. 

 ಇದೇ ವೇಳೆ ಬಿಜೆಪಿಯ ‘ಕಾಂಗ್ರೆಸ್ ಮುಕ್ತ’ ಭಾರತ ಎಂಬ ಸಂಕಲ್ಪವು ಕರ್ನಾಟಕದಲ್ಲಿ ಸಹ ಈಡೇರಿದೆ ಎಂದು ಕರ್ನಾಟಕ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. 

 ಕಳೆದ ಅವಧಿಯಲ್ಲಿ 112 ಶಾಸಕರ ಬಲ ಹೊಂದಿದ್ದ ಕಾಂಗ್ರೆಸ್ ಪಕ್ಷದ ಶಾಸಕರ ಸಂಖ್ಯೆ ಈ ಬಾರಿ ಚುನಾವಣೆಯಲ್ಲಿ 78  ಸ್ಥಾನಕ್ಕಿಳಿದಿದೆ. ಹೀಗಿದ್ದರೂ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಅಧಿಕಾರದ ದುರಾಸೆಗೆ ಬಿದ್ದು ಜೆಡಿಎಸ್ ಜತೆ ಅಪವಿತ್ರ ಮೈತ್ರಿ ಸಾಧಿಸಿರಬಹುದು. 

ಆದರೆ ಆಡಳಿತದ ಚುಕ್ಕಾಣಿ ಜೆಡಿಎಸ್ ಕೈಗೆ ಸೇರಿದ್ದು, ನಮ್ಮ ಧ್ಯೇಯದಂತೆ ಕರ್ನಾಟಕ ಕಾಂಗ್ರೆಸ್ ಮುಕ್ತವಾಗಿದೆ ಎಂದು ಜಾವಡೇಕರ್ ಹೇಳಿದ್ದಾರೆ. 

loader