ರಾಜ್ಯಕ್ಕೆ ಮೋದಿ ಆಗಮನ ಸಂಚಲನವನ್ನು ಉಂಟು ಮಾಡುವುದು ಹೌದಾದರೂ ಬಿಜೆಪಿ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಿಜೆಪಿ ಹೈಕಮಾಂಡ್ ಟಾಸ್ಕ್ ಜಾರಿಗೊಳಿಸಲು ರಾಜ್ಯ ಬಿಜೆಪಿ ಹರಸಾಹಸಪಡುತ್ತಿದೆ. ಕರ್ನಾಟಕದಲ್ಲಿ ಸರಣಿ ಸರಣಿ ಸಮಾವೇಶಕ್ಕೆ ಬಿಜೆಪಿ ಹೈಕಮಾಂಡ್ ನಿರ್ದೇಶಿಸಿದೆ.
ಬೆಂಗಳೂರು (ಏ. 27): ರಾಜ್ಯಕ್ಕೆ ಮೋದಿ ಆಗಮನ ಸಂಚಲನವನ್ನು ಉಂಟು ಮಾಡುವುದು ಹೌದಾದರೂ ಬಿಜೆಪಿ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಿಜೆಪಿ ಹೈಕಮಾಂಡ್ ಟಾಸ್ಕ್ ಜಾರಿಗೊಳಿಸಲು ರಾಜ್ಯ ಬಿಜೆಪಿ ಹರಸಾಹಸಪಡುತ್ತಿದೆ. ಕರ್ನಾಟಕದಲ್ಲಿ ಸರಣಿ ಸರಣಿ ಸಮಾವೇಶಕ್ಕೆ ಬಿಜೆಪಿ ಹೈಕಮಾಂಡ್ ನಿರ್ದೇಶಿಸಿದೆ.
ಬಿರು ಬೇಸಿಗೆ ಕಾಲವಾಗಿರುವುದರಿಂದ ರ್ಯಾಲಿಗಳಿಗೆ ಜನರನ್ನು ಸೇರಿಸಲು ರಾಜ್ಯ ನಾಯಕರು ಪರಡಾಡುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇರಿಸಬೇಕೆಂದು ಬಿಜೆಪಿ ವರಿಷ್ಠರು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಗಮನ ಸಂಚಲನವನ್ನು ಉಂಟು ಮಾಡುವುದು ಹೌದಾದರೂ ಜನರನ್ನು ಸೇರಿಸುವುದು ದೊಡ್ಡ ಸವಾಲಾಗಿದೆ.
ಒಂದು ಮಹಾ ರ್ಯಾಲಿ ಆಯೋಜನೆಗೆ 15 ದಿನಗಳ ಪೂರ್ವತಯಾರಿ ಅವಶ್ಯಕ. ಸಂಜೆ 4 ರ ಸಮಾವೇಶಕ್ಕೆ ಮಧ್ಯಾಹ್ನ 1ರೊಳಗೆಲ್ಲಾ ಜನ ಜಮಾವಣೆ ಅತ್ಯಗತ್ಯ. ಮಧ್ಯಾಹ್ನ 1 ರಿಂದ ಸಂಜೆ 6ರವರೆಗೂ ಜನ ಹಿಡಿದಿಡುವುದೂ ಮಹಾ ಸಾಹಸವಾಗಿದೆ. ಸಂಜೆವರೆಗೂ ಜನರನ್ನು ಹಿಡಿದಿಡಲು ಆಗುವುದಿಲ್ಲವೆಂದು ನಾಯಕರೆಲ್ಲರ ಅಳಲು. ಒಟ್ಟಿನಲ್ಲಿ ರಾಜ್ಯಕ್ಕೆ ಮೋದಿ ಬಂದರೂ ಕಷ್ಟ, ಬರದಿದ್ದರೂ ಕಷ್ಟ ಎನ್ನುವಂತಾಗಿದೆ.
