ಬೆಂಗಳೂರು (ಮೇ. 09): ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ  ಹಾಗೂ ಪ್ರಧಾನಮಂತ್ರಿ ನರೇಂದ್ರ  ಮೋದಿ ಅವರ ‘ಕಟ್ಟ ಕಡೆಯ ಆಟ’  ಇಂದು ಸಂಪನ್ನವಾಗಲಿದೆ.

ಈ ಚುನಾವಣೆಗೆ ಸೀಮಿತವಾದಂತೆ  ಈ ಇಬ್ಬರು ನಾಯಕರು ರಾಜ್ಯದಲ್ಲಿ  ಬುಧವಾರ ತಮ್ಮ ಅಂತಿಮ ಪ್ರಚಾರ  ಕೈಗೊಳ್ಳಲಿದ್ದಾರೆ. ಗುರುವಾರ ಸಂಜೆಗೆ  ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು, ಹೊರಗಿನವರು ಕ್ಷೇತ್ರದಿಂದ ಹೊರ ಹೋಗಬೇಕಿದೆ. ಇದಾದ ನಂತರ ಮನೆ-ಮನೆಗೆ ಭೇಟಿ ನೀಡಿ ಮತ ಕೋರುವ ಘಟ್ಟ ಆರಂಭವಾಗಲಿದೆ.  

ಮೋದಿ ಎಲ್ಲೆಲ್ಲಿ?

ಬೆಳಗ್ಗೆ 10.30 ಬಂಗಾರ ಪೇಟೆಯಲ್ಲಿ ಸಮಾವೇಶ
ಮ.1.30 ಚಿಕ್ಕಮಗಳೂರಲ್ಲಿ ಸಮಾವೇಶ
ಸಂಜೆ 4.0 ಬೆಳಗಾವಿ ನಗರದಲ್ಲಿ ಸಮಾವೇಶ
6.30 ಬೀದರ್ ನಗರದಲ್ಲಿ ಸಮಾವೇಶ
21 ರ‌್ಯಾಲಿ 6 ದಿನದಲ್ಲಿ

ರಾಹುಲ್ ಎಲ್ಲೆಲ್ಲಿ?
ಬೆಳಗ್ಗೆ 10.30 ಬಸವನ ಗುಡಿಯಿಂದ ಪ್ರಚಾರ
ಬೆಳಗ್ಗೆ 11.30 ಗಾರ್ಮೆಂಟ್ಸ್ ನೌಕರರ ಜತೆ ಸಂವಾದ
ಮಧ್ಯಾಹ್ನ 1.00 ರಸೆಲ್ ಮಾರ್ಕೆಟ್ ಬಳಿ ಸಮಾವೇಶ
ಸಂಜೆ 3.30 ಬೆಮೆಲ್  ವೃತ್ತದಲ್ಲಿ ಸಭೆ
ಸಂಜೆ 5.00 ಹೆಬ್ಬಾಳದಲ್ಲಿ ಕಾರ್ಯಕರ್ತರ ಸಮಾವೇಶ