ಬೈಂದೂರು ಬಿಜೆಪಿ ಅಭ್ಯರ್ಥಿ ಪರ ಪರೇಶ್ ಮೆಸ್ತಾ ಪೋಷಕರಿಂದ ಮತ ಪ್ರಚಾರ

First Published 10, May 2018, 1:31 PM IST
Paresh Mesta Parents Campaign Pro-BJP Candidate
Highlights

ಪರೇಶ್ ಮೇಸ್ತಾ ಪೋಷಕರು ಬೈಂದೂರು ಬಿಜೆಪಿ ಅಭ್ಯರ್ಥಿ ಸುಕುಮಾರ್ ಶೆಟ್ಟಿ ಪರ ಪ್ರಚಾರ ಮಾಡಿದ್ದಾರೆ.  ಪರೇಶ್ ಮೇಸ್ತಾ ತಂದೆ ಕಮಲಾಕರ್ ಮೇಸ್ತಾ ತಾಯಿ ರುಕ್ಮಾ ಭಾಯಿ ಗಂಗೊಳ್ಳಿ, ಮರವಂತೆ ಪ್ರದೇಶದಲ್ಲಿ  ಬಿಜೆಪಿ ಪರ ಕ್ಯಾಂಪೇನ್ ಮಾಡಿದ್ದಾರೆ. 

ಉಡುಪಿ (ಮೇ. 10):  ಪರೇಶ್ ಮೇಸ್ತಾ ಪೋಷಕರು ಬೈಂದೂರು ಬಿಜೆಪಿ ಅಭ್ಯರ್ಥಿ ಸುಕುಮಾರ್ ಶೆಟ್ಟಿ ಪರ ಪ್ರಚಾರ ಮಾಡಿದ್ದಾರೆ.  ಪರೇಶ್ ಮೇಸ್ತಾ ತಂದೆ ಕಮಲಾಕರ್ ಮೇಸ್ತಾ ತಾಯಿ ರುಕ್ಮಾ ಭಾಯಿ ಗಂಗೊಳ್ಳಿ, ಮರವಂತೆ ಪ್ರದೇಶದಲ್ಲಿ  ಬಿಜೆಪಿ ಪರ ಕ್ಯಾಂಪೇನ್ ಮಾಡಿದ್ದಾರೆ. 

ಮೀನುಗಾರ ಸಮುದಾಯದ ಮನೆಗಳಿರುವ ಪ್ರದೇಶಗಳಲ್ಲಿ ಮನೆಗೆ ಮನೆಗೆ ತೆರಳಿ ಮತ ಯಾಚನೆ ಮಾಡಿದ್ದಾರೆ. ಮೇಸ್ತಾ ಪೋಷಕರಿಗೆ ನೂರಾರು ಕಾರ್ಯಕರ್ತರು ಸಾಥ್ ನೀಡಿದ್ದಾರೆ.  ಮಗನಿಗೆ ನ್ಯಾಯ ದೊರಕಲು ಸರ್ಕಾರ ಬದಲಿಸುವಂತೆ ಮನವಿ ಮಾಡಿದ್ದಾರೆ. 

2016 ರಲ್ಲಿ ನಡೆದ ಕೋಮು ಗಲಭೆಯಲ್ಲಿ ಪರೇಶ್ ಮೆಸ್ತಾ ನಾಪತ್ತೆಯಾಗಿದ್ದರು. ಕೆಲ ದಿನಗಳ ಬಳಿಕ ಮೃತ ದೇಹ ಪತ್ತೆಯಾಗಿತ್ತು. ಈ ಘಟನೆ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. 

loader