ನೌಕಾದಳ ಅಧಿಕಾರಿಗಳಿರುವ ಈ ಮತಗಟ್ಟೆಯಲ್ಲಿ ಚಲಾವಣೆಯಾಗಿದ್ದು 2 ಮತಗಳು ಮಾತ್ರ!

Only 2 INS Officers voted for Karnataka Assembly Election
Highlights

ಐಎನ್‌ಎಸ್ ಕದಂಬ ನೇವಲ್ ಬೇಸ್ ಮತಗಟ್ಟೆಯಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಎರಡು ಮತ ಚಲಾವಣೆಯಾಗಿದೆ.  ನೇವಲ್ ಬೇಸ್ ಮತಗಟ್ಟೆಯಲ್ಲಿ ಒಟ್ಟು 661 ಮತಗಳಲ್ಲಿ ಕೇವಲ ಎರಡು ಮತಗಳು ಮಾತ್ರ ಚಲಾವಣೆಯಾಗಿದೆ.  ರಾಜ್ಯ ವಿಧಾನಸಭಾ ಚುನಾವಣೆಗೂ ತಮಗೂ ಸಂಬಂಧ ಇಲ್ಲದಿರುವಂತೆ ರಕ್ಷಣಾ ಇಲಾಖೆಯ ಸಿಬ್ಬಂದಿಗಳು ನಡೆದುಕೊಂಡಿದ್ದಾರೆ. 

ಕಾರವಾರ (ಮೇ. 14): ಐಎನ್‌ಎಸ್ ಕದಂಬ ನೇವಲ್ ಬೇಸ್ ಮತಗಟ್ಟೆಯಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಎರಡು ಮತ ಚಲಾವಣೆಯಾಗಿದೆ. 

ನೇವಲ್ ಬೇಸ್ ಮತಗಟ್ಟೆಯಲ್ಲಿ ಒಟ್ಟು 661 ಮತಗಳಲ್ಲಿ ಕೇವಲ ಎರಡು ಮತಗಳು ಮಾತ್ರ ಚಲಾವಣೆಯಾಗಿದೆ.  ರಾಜ್ಯ ವಿಧಾನಸಭಾ ಚುನಾವಣೆಗೂ ತಮಗೂ ಸಂಬಂಧ ಇಲ್ಲದಿರುವಂತೆ ರಕ್ಷಣಾ ಇಲಾಖೆಯ ಸಿಬ್ಬಂದಿಗಳು ನಡೆದುಕೊಂಡಿದ್ದಾರೆ. 

2014 ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಶೇ.30 ರಷ್ಟು ಮತ ಚಲಾವಣೆಯಾಗಿತ್ತು. ಯಾರು ಮತ ಚಲಾವಣೆ ಮಾಡುವುದಿಲ್ಲವೋ, ಅದನ್ನು ನಿರ್ಲಕ್ಷಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎನ್ ಸಿ ಪಿ ಅಭ್ಯರ್ಥಿ ಮಾಧವ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಅವರು ಸಂವಿಧಾನಕ್ಕೆ ಮಾಡಿದ ಅಪಮಾನ ಎಂದು ವ್ಯಾಖ್ಯಾನಿಸಿದ್ದಾರೆ.

ಗುಡ್ಡಗಾಡು ಪ್ರದೇಶದಲ್ಲಿ ತೆವಳುತ್ತಾ ಬಂದು ಮತದಾನ ಮಾಡಿದ ಉದಾಹರಣೆಗಳಿವೆ. ಚುನಾವಣಾ ಅಧಿಕಾರಿ ಕಮಾಂಡರ್ ಆಫೀಸರ್ ಗೆ ಪತ್ರ ಬರೆದಿದ್ದೇವೆ. ಅಲ್ಲದೇ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಲು ಸಿದ್ದರಾಗಿದ್ದೇವೆ ಎಂದು ಮಾಧವ ನಾಯಕ ಹೇಳಿದ್ದಾರೆ. ಸರ್ಕಾರದ ಸೌಲಭ್ಯ ಕೊಡದೇ  ಅವರನ್ನು ಅಮಾನತ್ತು ಮಾಡಬೇಕು.  ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 
 

loader