ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೆಲ ಅನಿವಾಸಿ ಭಾರತೀಯರು ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 

ಬೆಂಗಳೂರು (ಏ. 30): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೆಲ ಅನಿವಾಸಿ ಭಾರತೀಯರು ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 

ಕೆಪಿಸಿಸಿ ಕಚೇರಿಯಲ್ಲಿ ಭಾರತದ ಟೆಲಿಕಮ್ಯೂನಿಕೇಶನ್ ತಜ್ಞ ಶ್ಯಾಂ ಪ್ರಿತ್ರೋಡ ಹಾಗೂ ಅನಿವಾಸಿ ಭಾರತೀಯರ ಜಂಟಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತದ ಜನರು ಪ್ರಪಂಚದ ಎಲ್ಲ ಕಡೆ ಇದ್ದಾರೆ. ಕಾಂಗ್ರೆಸ್ ಸಿದ್ಧಾಂತವನ್ನ ಎಲ್ಲರೂ ಇಷ್ಟಪಡುತ್ತಾರೆ. ಕಾಂಗ್ರೆಸ್ ಗೆ ಅನಿವಾಸಿ ಭಾರತೀಯರು ಬೆಂಬಲ ಕೊಡುತ್ತೇವೆ. ಅಮೇರಿಕ, ಲಂಡನ್ ಸೇರಿದಂತೆ ಎಲ್ಲ ಕಡೆ ನಮ್ಮವರು ಇದ್ದಾರೆ. ಅನಿವಾಸಿ ಭಾರತೀಯ ಅಭಿವೃದ್ಧಿಗೆ ಕಾಂಗ್ರೆಸ್ ಮೊದಲನಿಂದಲೂ ಕೆಲಸ ಮಾಡುತ್ತಿದೆ. ಅನಿವಾಸಿ ಭಾರತೀಯರ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಗೊತ್ತಿದೆ. 

ಬಹುತೇಕ ಅನಿವಾಸಿ ಭಾರತೀಯ ಸಮಸ್ಯೆಗಳನ್ನ ಕಾಂಗ್ರೆಸ್ ಪಕ್ಷ ಬಗೆಹರಿಸಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ದೇಶದ ದಿಕ್ಸೂಚಿ. ಹೀಗಾಗಿ ನಾವೆಲ್ಲರೂ ಕಾಂಗ್ರೆಸ್ ಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.