ಬೆಂಗಳೂರು(ಮೇ.03): ಮಹಿಳಾ ಎಂಪವರ್ಮೆಂಟ್ ಪಾರ್ಟಿ ಅಧ್ಯಕ್ಷೆ ನೌಹೇರಾ ಶೇಖ್  ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿಸುವ ಘಟನೆ ನಾಗವಾರ ಬಳಿ ನಡೆದಿದೆ. 
ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ನಾಗವಾರ ಬಳಿ ಸಂಜೆ 7 ಗಂಟೆ ವೇಳೆ ಮತಯಾಚನೆ ನಡೆಸುತ್ತಿದ್ದಾಗ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ಬಾಲಿವುಡ್ ನಟರು ಉಪಸ್ಥಿತರಿದ್ದು ಅವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಕೆ.ಜೆ.ಜಾರ್ಜ್ ಪರ ಘೋಷಣೆ ಕೂಗುತ್ತಾ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. 
ಈ ಸಂದರ್ಭದಲ್ಲಿ ಖಾಸಗಿ ಸುದ್ದಿ ವಾಹಿನಿಯ ವರದಿಗಾರ ಹಾಗೂ ಕ್ಯಾಮೆರಾಮೆನ್ ಮೇಲೂ ಹಲ್ಲೆಯಾಗಿದ್ದು ವಾಹಿನಿಯ ಓಬಿ ಕೂಡ ಜಖಂ ಆಗಿದೆ. ಪ್ರತಿಭಟನೆ ನಡೆಸಿದ ನೌಹೇರಾ ಶೇಖ್ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.