ವೋಟರ್ ಐಡಿ ಇಲ್ಲವೇ : ಈ 12 ದಾಖಲೆಯಲ್ಲಿ ಒಂದು ಇದ್ದರೆ ಸಾಕು

No Need Voter ID For Voting
Highlights

ಮತದಾನಕ್ಕೆ ಭಾವಚಿತ್ರವುಳ್ಳ ಮತದಾರರ ಗುರುತಿನ ಚೀಟಿ (ಎಪಿಕ್) ಕಡ್ಡಾಯವೇನಲ್ಲ. ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಗುರುತಿನ ಚೀಟಿ ಇಲ್ಲದಿದ್ದರೂ ಈ ಕೆಳಕಂಡ 12 ಪುರಾವೆಗಳ ಪೈಕಿ ಯಾವುದಾದರೂ ಒಂದನ್ನು ಒದಗಿಸಿ ಹಕ್ಕು
ಚಲಾಯಿಸಬಹುದು. 

ಬೆಂಗಳೂರು :   ಮತದಾನಕ್ಕೆ ಭಾವಚಿತ್ರವುಳ್ಳ ಮತದಾರರ ಗುರುತಿನ ಚೀಟಿ (ಎಪಿಕ್) ಕಡ್ಡಾಯವೇನಲ್ಲ. ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಗುರುತಿನ ಚೀಟಿ ಇಲ್ಲದಿದ್ದರೂ ಈ ಕೆಳಕಂಡ 12 ಪುರಾವೆಗಳ ಪೈಕಿ ಯಾವುದಾದರೂ ಒಂದನ್ನು ಒದಗಿಸಿ ಹಕ್ಕು
ಚಲಾಯಿಸಬಹುದು. 

ಅವೆಂದರೆ: ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಬ್ಯಾಂಕ್/ಪೋಸ್ಟ್ ಆಫೀಸ್‌ನ ಫೋಟೋವುಳ್ಳ ಪಾಸ್ ಬುಕ್, ನರೇಗಾ ಜಾಬ್ ಕಾರ್ಡ್, ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಪೋಟೋವುಳ್ಳ ಪಿಂಚಣಿ ದಾಖಲೆ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಕೇಂದ್ರ/ರಾಜ್ಯ/
ಪಿಎಸ್‌ಯು ನೌಕರರಾಗಿದ್ದರೆ ಸರ್ಕಾರ ಕೊಟ್ಟಿರುವ ಫೋಟೋ ಸಹಿತ ಗುರುತು ಚೀಟಿ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ನೀಡಿರುವ ಸ್ಮಾರ್ಟ್ ಕಾರ್ಡ್, ಅಧಿಕೃತ ಫೋಟೋ ವೋಟರ್ ಸ್ಲಿಪ್, ಸಂಸದರು, ಶಾಸಕರು, ಎಮ್ಮೆಲ್ಸಿಗಳಿಗೆ ನೀಡಿದ ಅಧಿಕೃತ ಗುರುತಿನ ಚೀಟಿ.

ಇವಿಷ್ಟು ನಿಮ್ಮ ಬಳಿ ಇದ್ದಲ್ಲಿ ಇದರಲ್ಲಿ ಯಾವುದಾದರು ಒಂದನ್ನು ತೋರಿಸಿ ನೀವು ಮತ ಚಲಾವಣೆ ಮಾಡಬಹುದಾಗಿದೆ. 

loader