Asianet Suvarna News Asianet Suvarna News

ಕಾಣದ ಅಭಿವೃದ್ಧಿ: ಮಂಡ್ಯ ಗ್ರಾಮದಲ್ಲಿ ಮತದಾನ ಬಹಿಷ್ಕಾರ

ಕಳೆದ ಐದು ವರ್ಷಗಳಿಂದಲೂ ಯಮ್ಮನಹಳ್ಳಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನೂ ತೆಗೆದುಕೊಂಡಿಲ್ಲ, ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಗ್ರಾಮದ ಬೂತ್ ಸಂಖ್ಯೆ 57ರಲ್ಲಿ ಮತದಾನ ನಡೆದಿಲ್ಲ. ದಲಿತ ಕಾಲೋನಿಯ ಮತದಾರರು ಮತದಾನದಿಂದ ಹಿಂದೆ ಸರಿದಿದ್ದಾರೆ.

No infrastructure mandya villagers boycott voting

ಮಂಡ್ಯ: ಗ್ರಾಮದಲ್ಲಿ ಯಾವುದೇ ಅಗತ್ಯ ಮೂಲ ಸೌಕರ್ಯ ಒದಗಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.

ಕಳೆದ ಐದು ವರ್ಷಗಳಿಂದಲೂ ಯಮ್ಮನಹಳ್ಳಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನೂ ತೆಗೆದುಕೊಂಡಿಲ್ಲ, ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಗ್ರಾಮದ ಬೂತ್ ಸಂಖ್ಯೆ 57ರಲ್ಲಿ ಮತದಾನ ನಡೆದಿಲ್ಲ. ದಲಿತ ಕಾಲೋನಿಯ ಮತದಾರರು ಮತದಾನದಿಂದ ಹಿಂದೆ ಸರಿದಿದ್ದಾರೆ.

ಕರ್ನಾಟಕ ವಿಧಾನಸಭೆಗೆ ಮೇ 12ರಂದು ಮತದಾನ ನಡೆಯುತ್ತಿದ್ದು, ಎಲ್ಲೆಡೆ ಮತದಾರರು ಸಂಭ್ರಮದಿಂದ ಮತ ಹಾಕುತ್ತಿದ್ದಾರೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಮತದಾನಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಇನ್ನು ಕೆಲವೆಡೆ ಮತದಾನದ ಪ್ರಕ್ರಿಯೆ ನೀರಸವಾಗಿದೆ. ಬೆಂಗಳೂರು ನಗರದ ಕೆಲವು ಬೂತ್‌ಗಳಲ್ಲಿ ಉದ್ದದ ಸಾಲಿನಲ್ಲಿ ನಿಂತು, ಮತದಾರರು ಸಹನೆಯಿಂದ ನಿಂತು, ಮತ ಹಾಕುತ್ತಿರುವುದು ಕಾಣುತ್ತಿತ್ತು.

Follow Us:
Download App:
  • android
  • ios