ನೋಟಾ ಮತಗಳೇ ಹೆಚ್ಚಿದ್ದರೆ ಚುನಾವಣೆ ಪ್ರಕ್ರಿಯೆ ರದ್ದಿಲ್ಲ

No fresh polls if NOTA votes exceed candidates
Highlights

ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಶೇ.50ಕ್ಕಿಂತ ಹೆಚ್ಚು ನೋಟಾ ಆಯ್ಕೆ ಮಾಡಿಕೊಂಡರೂ ಅಭ್ಯರ್ಥಿಗಳು ಪಡೆದಿರುವ ಮತಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲಾಗುತ್ತದೆಯೇ ಹೊರತು ಮತ್ತೊಮ್ಮೆ ಮತದಾನ ನಡೆಸುವುದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರು :  ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಶೇ.50ಕ್ಕಿಂತ ಹೆಚ್ಚು ನೋಟಾ ಆಯ್ಕೆ ಮಾಡಿಕೊಂಡರೂ ಅಭ್ಯರ್ಥಿಗಳು ಪಡೆದಿರುವ ಮತಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲಾಗುತ್ತದೆಯೇ ಹೊರತು ಮತ್ತೊಮ್ಮೆ ಮತದಾನ ನಡೆಸುವುದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧಿಸಿರುವ ಯಾವುದೇ ಅಭ್ಯರ್ಥಿಗೂ ಮತ ಚಲಾಯಿಸಲು ಇಷ್ಟವಿಲ್ಲದ ಮತದಾರರು ತಮ್ಮ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸದಿರಲು ಸುಪ್ರೀಂಕೋರ್ಟ್‌ ಆದೇಶದನ್ವಯ ನೋಟಾ ಆಯ್ಕೆಯನ್ನು ಇಡಲಾಗಿದೆ. ನ್ಯಾಯಾಲಯದ ಆದೇಶದಂತೆ ಚುನಾವಣಾ ಆಯೋಗವು ನೋಟಾ ಚಿಹ್ನೆಯನ್ನು ಇವಿಎಂ ಮತ್ತು ಮತಪತ್ರಗಳ ಕೊನೆಯಲ್ಲಿ ಅಳವಡಿಸಿದೆ ಎಂದರು.

ಅಭ್ಯರ್ಥಿಗಳಿಗೆ ದೊರೆತ ಮತಗಳಿಗಿಂತಲೂ ನೋಟಾ ಗಳಿಸಿದ ಮತಗಳು ಹೆಚ್ಚಿದ್ದ ಸಂದರ್ಭದಲ್ಲಿ ಮತ್ತೊಮ್ಮೆ ಮತದಾನಕ್ಕೆ ಅವಕಾಶ ನೀಡುವುದಿಲ್ಲ. ಬದಲಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಅತಿ ಹೆಚ್ಚು ಮತಗಳಿಸಿದ ಅಭ್ಯರ್ಥಿಯನ್ನು ಚುನಾಯಿತ ಅಭ್ಯರ್ಥಿ ಎಂದು ಘೋಷಿಸಲಾಗುವುದು ಎಂದು ಹೇಳಿದರು.

loader