ಕರ್ನಾಟಕದಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ಚುನಾವಣಾ ಪ್ರಚಾರ ಕಾರ್ಯಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿದೆ. ಆದರೆ ಕೆಲವು ಕಾಂಗ್ರೆಸ್ ಮುಖಂಡರು ಮಾತ್ರ ತಮ್ಮ ಕ್ಷೇತ್ರ ಬಿಟ್ಟು ಹೊರಕ್ಕೆ ಬರುತ್ತಿಲ್ಲ. ಅವರು ಕೇವಲ ತಮ್ಮ ಕ್ಷೇತ್ರಕ್ಕಷ್ಟೇ ಸೀಮಿತವಾಗಿದ್ದಾರೆ.
ಬೆಂಗಳೂರು : ಕರ್ನಾಟಕದಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ಚುನಾವಣಾ ಪ್ರಚಾರ ಕಾರ್ಯಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿದೆ. ಆದರೆ ಕೆಲವು ಕಾಂಗ್ರೆಸ್ ಮುಖಂಡರು ಮಾತ್ರ ತಮ್ಮ ಕ್ಷೇತ್ರ ಬಿಟ್ಟು ಹೊರಕ್ಕೆ ಬರುತ್ತಿಲ್ಲ. ಅವರು ಕೇವಲ ತಮ್ಮ ಕ್ಷೇತ್ರಕ್ಕಷ್ಟೇ ಸೀಮಿತವಾಗಿದ್ದಾರೆ. ತಾವು ಗೆದ್ದರೇ ಸಾಕು ಬೇರೆಯವರ ಕಥೆ ನಮಗ್ಯಾಕೆ ಎನ್ನುವ ಮನೋಭಾವನೆ ಅವರಲ್ಲಿ ಕಂಡು ಬರುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹೊರತುಪಡಿಸಿ ಬೇರೆ ಯಾವ ಸಚಿವರೂ ಕೂಡ ಕ್ಷೇತ್ರ ಸುತ್ತಾಡಿ ಪ್ರಚಾರ ಮಾಡುತ್ತಿಲ್ಲ. ಈ ಸಂಬಂಧ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಅವರಿಂದಲೇ ಅಸಮಾಧಾನ ವ್ಯಕ್ತವಾಗುತ್ತಿದೆ.
ಹಿರಿಯ ಸಚಿವರೇ ಕಾಂಗ್ರೆಸ್ ಪ್ರಚಾರ ಕಾರ್ಯಕ್ಕೆ ನಿರಾಸಕ್ತಿ ತೋರುತ್ತಿದ್ದಾರೆ. ಅಲ್ಲದೇ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳದ ಹಿನ್ನೆಲೆಯಲ್ಲಿ ಸೋಲುವ ಭಯ ಅವರನ್ನು ಕಾಡುತ್ತಿದೆಯಾ ಎನ್ನುವ ಪ್ರಶ್ನೆಯೂ ಕೂಡ ಮೂಡಿದೆ.
ಆದ್ದರಿಂದ ರಾಜ್ಯ ಸುತ್ತಾಡದಿದ್ದರೂ ತಮ್ಮ ಜಿಲ್ಲೆಯಲ್ಲಾದರೂ ಕೂಡ ಸುತ್ತಿ ಶಾಸಕರ ಗೆಲುವಿಗೆ ಶ್ರಮಿಸಲು ರಾಹುಲ್ ಸೂಚನೆ ನೀಡಿದ್ದಾರೆ. ಉಳಿದಿರುವ ಎರೆಡು ದಿನ ನಮ್ಮ ಕ್ಷೇತ್ರ ನೋಡಿಕೊಂಡರೆ ಸಾಕು ಎನ್ನುವ ಮನೋಭಾವವೂ ಈ ಸಚಿವರಲ್ಲಿ ಇದೆ ಎನ್ನಲಾಗಿದೆ.
ಜಿ ಪರಮೇಶ್ವರ್, ಕ್ಷೇತ್ರ ಬಿಟ್ಟು ಬಾರದೇ ರಾಹುಲ್ ಕೊನೆಯ ಯಾತ್ರೆಗಳಲ್ಲೂ ನಾಪತ್ತೆಯಾಗಿದ್ದಾರೆ. ಗದಗ್ ನ ಎಚ್.ಕೆ ಪಾಟೀಲ್. ತಾವಾಯ್ತು ತಮ್ಮ ಕ್ಷೇತ್ರವಾಯ್ತು ಎಂದುಕೊಂಡಿದ್ದು ಹಲವು ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಟಾರ್ ಕ್ಯಾಂಪೇನರ್ ಎಂದೇ ಪ್ರಖ್ಯಾತರಾಗಿದ್ದರು. ಸಾಗರದ ಅಭ್ಯರ್ಥಿಯಾಗಿರುವ ಕಾಗೋಡು ತಿಮ್ಮಪ್ಪ ವಯಸ್ಸಿನ ಕಾರಣ ನೀಡಿ ಸಾಗರದಲ್ಲಿ ಮಾತ್ರವೇ ಪ್ರಚಾರ ಮಾಡುತ್ತಿದ್ದಾರೆ.
ಕೆಪಿಸಿಸಿ ಇಬ್ಬರು ಕಾರ್ಯಾಧ್ಯಕ್ಷರು ತಮ್ಮ ತಮ್ಮ ಕ್ಷೇತ್ರಗಳಿಗೆ ಸೀಮಿತರಾಗಿದ್ದಾರೆ. ದಿನೇಶ್ ಗುಂಡೂರಾವ್ ಅವರು ಗಾಂಧಿನಗರ ಕ್ಷೇತ್ರಕ್ಕೆ ಹೆಚ್ಚು ಸಮಯ ನೀಡುತ್ತಿದ್ದಾರೆ . ಸಿಎಂ ಗೆಲುವಿಗಾಗಿ ಬಾದಾಮಿಗೆ ಎಸ್ ಆರ್ ಪಾಟೀಲ್ ಸೀಮಿತವಾಗಿದ್ದಾರೆ. ಇನ್ನೂ ಅನೇಕ ಕಾಂಗ್ರೆಸ್ ಮುಖಂಡರೂ ಕೂಡ ಯಾವುದೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿಲ್ಲ.
