Asianet Suvarna News Asianet Suvarna News

ವಿಶ್ವಾಸ ಮತ ಸೋತರೆ ಅನುಕಂಪ ಗಿಟ್ಟಿಸಲು ಬಿಜೆಪಿ ಪ್ಲಾನ್

ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎದುರಾಗಿರುವ ಬಹುಮತದ ಅಗ್ನಿ ಪರೀಕ್ಷೆಯಲ್ಲಿ ಅವರೇ ನಾದರೂ ವಿಫಲವಾದರೆ ಅನುಕಂಪದ ಅಲೆ ಸೃಷ್ಟಿಸುವ ಸಾಧ್ಯತೆಯಿದ್ದು, ಲಿಂಗಾಯತ ನಾಯಕನಿಗೆ ಮುಖ್ಯಮಂತ್ರಿ ಪಟ್ಟವನ್ನು ತಪ್ಪಿಸಲಾಗಿದೆ ಎಂಬುದಾಗಿ ಮುಂಬರುವ ಲೋಕಸಭಾ ಚುನಾವಣೆವರೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಪ್ರಚಾರ ಮಾಡುವ  ಸಂಭವವಿದೆ. 

New CM BS Yeddyurappa To Take Floor Test Today

ಬೆಂಗಳೂರು: ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎದುರಾಗಿರುವ ಬಹುಮತದ ಅಗ್ನಿ ಪರೀಕ್ಷೆಯಲ್ಲಿ ಅವರೇ ನಾದರೂ ವಿಫಲವಾದರೆ ಅನುಕಂಪದ ಅಲೆ ಸೃಷ್ಟಿಸುವ ಸಾಧ್ಯತೆಯಿದ್ದು, ಲಿಂಗಾಯತ ನಾಯಕನಿಗೆ ಮುಖ್ಯಮಂತ್ರಿ ಪಟ್ಟವನ್ನು ತಪ್ಪಿಸಲಾಗಿದೆ ಎಂಬುದಾಗಿ ಮುಂಬರುವ ಲೋಕಸಭಾ ಚುನಾವಣೆವರೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಪ್ರಚಾರ ಮಾಡುವ  ಸಂಭವವಿದೆ.  ಇಂದು ವಿಧಾನಸಭೆಯಲ್ಲಿ ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸಬೇಕಿದೆ. ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಿಜೆಪಿಗೆ ಬಹುಮತದ ಕೊರತೆ ಇದೆ. 

104 ಸ್ಥಾನಗಳನ್ನು ಪಡೆದುಕೊಂಡಿರುವ ಬಿಜೆಪಿಗೆ ಬಹುಮತ ಸಾಬೀತುಪಡಿಸಲು 112 ಸ್ಥಾನಗಳ ಅಗತ್ಯ ಇದೆ. ಎಂಟು ಸ್ಥಾನಗಳ  ಕೊರತೆ ಇದ್ದರೂ ಬಹುಮತ ಗೆಲ್ಲುವ ಆತ್ಮವಿಶ್ವಾಸದಲ್ಲಿ ಬಿಜೆಪಿ ನಾಯಕ ರಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಅವರು ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದರೆ ರಾಜ್ಯದ ಜನರಲ್ಲಿ ಅನುಕಂಪದ ಅಲೆ ಸೃಷ್ಟಿಸಲು ಮುಂದಾಗಿದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೈಹಾಕಿದ ಕಾಂಗ್ರೆಸ್ ವಿರುದ್ಧ ಲಿಂಗಾಯತ ಸಮುದಾಯ ಅಸಮಾಧಾನ ವ್ಯಕ್ತಪಡಿಸಿದೆ. ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುವುದರ ಜತೆಗೆ ಕಾಂಗ್ರೆಸ್ -ಜೆಡಿಎಸ್ ಪಕ್ಷವು ಷಡ್ಯಂತ್ರ ರೂಪಿಸಿ ಲಿಂಗಾಯತ ನಾಯಕರಿಗೆ ಮುಖ್ಯಮಂತ್ರಿ ಹುದ್ದೆಯನ್ನು ತಪ್ಪಿಸಿದೆ ಎಂದು ಜನರ ಮುಂದೆ ಹೋಗುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. 

ಕಾಂಗ್ರೆಸ್-ಜೆಡಿಎಸ್ ವಿರುದ್ಧ ಜನರು ಆಕ್ರೋಶಗೊಳ್ಳುವಂತಹ  ವಾತಾವರಣ ಸೃಷ್ಟಿ ಮಾಡುವುದು ಬಿಜೆಪಿಯ ಉದ್ದೇಶವಾಗಿದೆ. ಈ  ಹಿಂದೆ ಜೆಡಿಎಸ್ ನೊಂದಿಗೆ ಮೈತ್ರಿ ಸರ್ಕಾರ ನಡೆಸಿದಾಗ ಬಿಜೆಪಿ ಅಧಿಕಾರ ಬಿಟ್ಟುಕೊಟ್ಟಿರಲಿಲ್ಲ. ಆಗ ಜನರ ಬಳಿಗೆ ಇದೇ ವಿಷಯವನ್ನಿಟ್ಟುಕೊಂಡು ಹೋಗಿ ಜಯಭೇರಿ ಬಾರಿಸಿ ಅಧಿಕಾರ ಚುಕ್ಕಾಣಿ ಹಿಡಿಯಲಾಗಿತ್ತು. ಅದೇ ತಂತ್ರ ಈ ಬಾರಿ ಅನುಸರಿಸಲು ಮುಂದಾಗಿದೆ ಎನ್ನಲಾಗಿದೆ. 

Follow Us:
Download App:
  • android
  • ios