ಮೋದಿ ಹೇಳಿದ ಸಿದ್ದರಾಮಯ್ಯ 8 ಕೆರೆ ನೀರು ಕುಡಿದ ಕತೆ

Narendra Modi Explain Siddu Govt Story
Highlights

ಜನತಾದಳ, ಲೋಕದಳ, ದಳದಳ ಎಲ್ಲವನ್ನೂ ನೋಡಿದ್ದಾರೆ.  ಕರ್ನಾಟಕದಲ್ಲಿ ಸಿದ್ದರೂಪಯ್ಯ ಸರ್ಕಾರ ಆಡಳಿತ. ಪಾದಯಾತ್ರೆ ನಾಟಕವಾಡಿ ಅಧಿಕಾರಕ್ಕೆ ಬಂದವರು. 5 ವರ್ಷದಲ್ಲಿ ರುಪಯ್ಯ ಸರ್ಕಾರ ಗಣಿ ನೀತಿ ರೂಪಿಸಲಿಲ್ಲ.  ರೂಪಯ್ಯ ಸರ್ಕಾರ ಕರ್ನಾಟಕವನ್ನು ಸಾಲದ ಸುಳಿಗೆ ಸಿಲುಕಿಸಿದೆ. ಕಾಂಗ್ರೆಸ್ ಮುಖಂಡರ ಖಜಾನೆಗಳು ತುಂಬಿ ತುಳುಕುತ್ತಿವೆ ' ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಬಳ್ಳಾರಿ(ಮೇ.03): ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಮೂರು ಪ್ರಮುಖ ಪಕ್ಷಗಳು ಮತಗಳಿಕೆಗಾಗಿ ರಾಜಕೀಯ ವಿರೋಧಿಗಳ ಮೇಲೆ  ಮಾತಿನ ಚುಚ್ಚುಬಾಣಗಳನ್ನು ಬಹಿರಂಗವಾಗಿಯೇ ಪ್ರಯೋಗಿಸುತ್ತಿದ್ದಾರೆ. 
ಇಂದು ಬಳ್ಳಾರಿಯಲ್ಲಿ ಚುನಾವಣಾ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ಸಿದ್ದರಾಮಯ್ಯ ಅವರ ಬಗ್ಗೆ8 ಕೆರೆ ನೀರು ಕುಡಿದ ಕತೆಯನ್ನು ಚುಟುಗಾಗಿ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು 8 ಕೆರೆ ನೀರು ಕುಡಿದು ಬಂದವರು. ಜನತಾದಳ, ಲೋಕದಳ, ದಳದಳ ಎಲ್ಲವನ್ನೂ ನೋಡಿದ್ದಾರೆ.  ಕರ್ನಾಟಕದಲ್ಲಿ ಸಿದ್ದರೂಪಯ್ಯ ಸರ್ಕಾರ ಆಡಳಿತ. ಪಾದಯಾತ್ರೆ ನಾಟಕವಾಡಿ ಅಧಿಕಾರಕ್ಕೆ ಬಂದವರು. 5 ವರ್ಷದಲ್ಲಿ ರುಪಯ್ಯ ಸರ್ಕಾರ ಗಣಿ ನೀತಿ ರೂಪಿಸಲಿಲ್ಲ.  ರೂಪಯ್ಯ ಸರ್ಕಾರ ಕರ್ನಾಟಕವನ್ನು ಸಾಲದ ಸುಳಿಗೆ ಸಿಲುಕಿಸಿದೆ. ಕಾಂಗ್ರೆಸ್ ಮುಖಂಡರ ಖಜಾನೆಗಳು ತುಂಬಿ ತುಳುಕುತ್ತಿವೆ ' ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರ ನೋಡಿ ಪಾಠ ಕಲಿಯಬೇಕು
ಸರ್ಕಾರ ಖರ್ಚು ಮಾಡಿದ ಹಣದ ಲಾಭ ಜನಸಾಮಾನ್ಯರಿಗೆ ಸಿಕ್ಕಿಲ್ಲ. ದಲ್ಲಾಳಿಗಳಿಗೆ ಮಾತ್ರ ಈ ಲಾಭ ಸಿಕ್ಕಿದೆ. ಸಣ್ಣಪುಟ್ಟ ಕೆಲಸಗಳನ್ನು ದುಡ್ಡು ಕೊಡದೇ ಕೆಲಸ ಆಗದೇ ಜನರು ನೊಂದಿದ್ದಾರೆ. ಅಕ್ರಮ ಗಣಿಗಾರಿಕೆ ನಿಲ್ಲಿಸುವ ಆಶ್ವಾಸನೆಯನ್ನು ಕಾಂಗ್ರೆಸ್ ಚೂರು ಚೂರು ಮಾಡಿದೆ. ಕರ್ನಾಟಕ ಸರ್ಕಾರ ಮಹಾರಾಷ್ಟ್ರ ಸರ್ಕಾರ ನೋಡಿ ಕಲಿಯಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 2 ವರ್ಷಗಳ ಬಳಿಕ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಕೇವಲ 2 ವರ್ಷದಲ್ಲಿ ಕೆರೆಗಳು, ಅಣೆಕಟ್ಟೆಗಳಿಂದ 8 ಕೋಟಿ ಕ್ಯೂಬಿಕ್ ಮೀಟರ್ ಹೂಳೆತ್ತಲಾಗಿದೆ. ಕರ್ನಾಟಕ ಸರ್ಕಾರ ಅದರಿಂದ ಪಾಠ ಕಲಿತಿದ್ದರೆ  ತುಂಗಭದ್ರಾ ಅಣೆಕಟ್ಟೆ ಪರಿಸ್ಥಿತಿ ಹೀಗಿರುತ್ತಿರಲಿಲ್ಲ' ಆಕ್ರೋಶ ವ್ಯಕ್ತಪಡಿಸಿದರು.

loader