ದರ್ಶನ್ ಪ್ರಚಾರ ಮುನಿರತ್ನಗೆ ಪ್ಲಸ್ ಆಗುತ್ತಾ..?

Munirathna Contest From rajarajeshwari
Highlights

ಒಂದು ಕಾಲದಲ್ಲಿ ಬೆಂಗಳೂರಿಗೆ ಪರ ಊರು ಎನ್ನಿಸಿ ಕೊಂಡಿದ್ದ ರಾಜರಾಜೇಶ್ವರಿನಗರ ಇದೀಗ ನಗರದ ಭಾಗವಾಗಿ ಹೋಗಿದೆ. ಇಲ್ಲಿ ನೆಲೆಸುವುದೆಂದರೆ ಪ್ರತಿ ಷ್ಠೆಯ ವಿಷಯ ಎಂಬಂತಾಗಿದೆ. ರಾಜಕೀಯ ಮುಖಂಡರು, ಸಿನಿಮಾ ತಾರೆಯರು,
ಕ್ರೀಡಾಪಟುಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ನೆಲೆಸಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ದಲ್ಲಿ ಸ್ಪರ್ಧಿಸುವುದೆಂದರೆ ಪ್ರತಿಷ್ಠೆ ಎಂಬ ಅಭಿಪ್ರಾಯ ವು ರಾಜಕೀಯ ವಲಯದಲ್ಲಿ ಮೂಡಿದೆ. 

ಪ್ರಭುಸ್ವಾಮಿ ನಟೇಕರ್

ಬೆಂಗಳೂರು :  ಒಂದು ಕಾಲದಲ್ಲಿ ಬೆಂಗಳೂರಿಗೆ ಪರ ಊರು ಎನ್ನಿಸಿ ಕೊಂಡಿದ್ದ ರಾಜರಾಜೇಶ್ವರಿನಗರ ಇದೀಗ ನಗರದ ಭಾಗವಾಗಿ ಹೋಗಿದೆ. ಇಲ್ಲಿ ನೆಲೆಸುವುದೆಂದರೆ ಪ್ರತಿ ಷ್ಠೆಯ ವಿಷಯ ಎಂಬಂತಾಗಿದೆ. ರಾಜಕೀಯ ಮುಖಂಡರು, ಸಿನಿಮಾ ತಾರೆಯರು, ಕ್ರೀಡಾಪಟುಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ನೆಲೆಸಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ದಲ್ಲಿ ಸ್ಪರ್ಧಿಸುವುದೆಂದರೆ ಪ್ರತಿಷ್ಠೆ ಎಂಬ ಅಭಿಪ್ರಾಯ ವು ರಾಜಕೀಯ ವಲಯದಲ್ಲಿ ಮೂಡಿದೆ. ಈ ಕ್ಷೇತ್ರ ದಲ್ಲಿ ಸುತ್ತಾಡಿದರೆ ಉತ್ತಮ ರಸ್ತೆ, ನಳನಳಿಸುವ ಪಾರ್ಕ್ ಗಳು ಕಾಣುತ್ತವೆ.

ಇದನ್ನು ಗಮನಿಸಿ ಕ್ಷೇತ್ರ ಅಭಿವೃದ್ಧಿಯಾಗಿದೆ ಎಂದು ಭಾವಿಸಿದರೆ ಅದು ತಪ್ಪು. ಕುಡಿ ಯುವ ನೀರು ಪೂರೈಕೆ, ಒಳ ಚರಂಡಿ ವ್ಯವಸ್ಥೆ, ಕೊಳಗೇರಿ ಗಳು, ಮೂಲಸೌಕರ್ಯ ಗಳ ಕೊರತೆ ಸಾಕಷ್ಟಿದೆ.  ಒಕ್ಕಲಿಗ ಸಮುದಾಯ ಹೆಚ್ಚಿರುವ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಕಣಕ್ಕಿಳಿಯಲು ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಭಾರೀ ಪೈಪೋಟಿ ಉಂಟಾಗಿತ್ತು. ಕಾಂಗ್ರೆಸ್ ತೆಕ್ಕೆಯಲ್ಲಿರುವ ಈ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಬಿಜೆಪಿ ಮತ್ತು ಜೆಡಿಎಸ್ ಹವಣಿಸುತ್ತಿವೆ.

ಕಾಂಗ್ರೆಸ್ ಶಾಸಕ ಮುನಿರತ್ನ ಅವರನ್ನು ಸೋಲಿಸಲು ಬಿಜೆಪಿ, ಜೆಡಿಎಸ್ ಜತೆಗೆ ತನ್ನ ವಿಭಿನ್ನ ಶೈಲಿಯಿಂದಾಗಿ ಪ್ರಖ್ಯಾತಿಯಾಗಿರುವ ನಟ  ಹುಚ್ಚ ವೆಂಕಟ್ ಎಂದೇ ಖ್ಯಾತಿಯಾಗಿರುವ ವೆಂಕಟ ರಾವ್ ಸಹ ಕಣಕ್ಕಿಳಿದಿದ್ದಾರೆ. ಆದರೆ, ಹುಚ್ಚ ವೆಂಕಟ್ ಇಲ್ಲಿ ಆಟಕ್ಕುಂಟು  ಲೆಕ್ಕಕ್ಕಿಲ್ಲ ಎಂಬುದು ವಾಸ್ತವ.

ಬಿಜೆಪಿ ಹಾಗೂ ಜೆಡಿಎಸ್‌ನಿಂದ ಸವಾಲು ಎದುರಿಸುತ್ತಿರುವ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ನಡೆಸಲಿದ್ದಾರೆ. ಇದು  ಮುನಿರತ್ನ ಅವರಿಗೆ ಎಷ್ಟರ ಮಟ್ಟಿಗೆ ಪ್ಲಸ್ ಆಗುತ್ತದೆ.ದರ್ಶನ್ ತಾರಾ ವರ್ಚಸ್ಸು ಎಷ್ಟು ಮತ ಸೆಳೆಯುತ್ತದೆ  ಎಂಬುದು ಕಾದು ನೋಡಬೇಕಿದೆ. ಅತ್ತ, ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪಿ. ಮುನಿರಾಜುಗೌಡ ಕ್ಷೇತ್ರದ ಜನತೆಗೆ ತೀರಾ ಹೊಸ ಮುಖವೇನಲ್ಲ. ಕಳೆದ ಬಾರಿ ಈ ವಿಧಾನಸಭಾ ಕ್ಷೇತ್ರವನ್ನೂ ಒಳಗೊಳ್ಳುವ ಬೆಂಗಳೂ ರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿದಿದ್ದರು. ಬಿಜೆಪಿಯಿಂದ ಟಿಕೆಟ್ ವಂಚಿತ ರಾಮಚಂದ್ರ ಜೆಡಿಎಸ್‌ನಿಂದ ಕಣಕ್ಕಿಳಿದ್ದಾರೆ.

ಪಕ್ಷದ ವರ್ಚಸ್ಸಿಗಿಂತ ರಾಮಚಂದ್ರ ಅವರಿಗೆ ಸೊಸೆ ಅಮೂಲ್ಯ ಸ್ಟಾರ್ ಮುಖ ಕ್ಷೇತ್ರದಲ್ಲಿ ಮತ ಗಳಿಕೆಗೆ ಸಹಕಾರಿಯಾಗುವ ನಿರೀಕ್ಷೆ ಇಟ್ಟುಕೊಳ್ಳಬಹುದು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಉತ್ತರಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ ವಿಭಜನೆಯಾದ ರಾಜರಾಜೇಶ್ವರಿ ನಗರ ಕ್ಷೇತ್ರ ತುಮಕೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ ಯಿಂದ ಮೈಸೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿವರೆಗೆ ಹರಡಿಕೊಂಡಿದೆ.

ಕ್ಷೇತ್ರದಲ್ಲಿ ನೈಸ್ ರಸ್ತೆ, ಆಸ್ಪತ್ರೆಗಳು, ಮಾಲ್‌ಗಳಿವೆ. ರಿಯಲ್ ಎಸ್ಟೇಟ್ ಪ್ರಭಾವದಿಂದ ವಲಸಿಗರ ಸಂಖ್ಯೆಗೂ ಕಡಿಮೆಯೇನಿಲ್ಲ. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಪ್ರಮುಖ ಅಸ್ತ್ರ. 4.71 ಲಕ್ಷ ಮತದಾರರ ಪೈಕಿ ಒಕ್ಕಲಿಗ ಸಮುದಾಯ ಮತ ಗಳು ಹೆಚ್ಚಿದ್ದು, ಇವರೇ ಪ್ರಮುಖ ನಿರ್ಣಯಕರಾಗಿದ್ದಾರೆ.

ಬ್ರಾಹ್ಮಣರು, ಲಿಂಗಾಯತರು, ದಲಿತ, ಮುಸ್ಲಿಂ ಸಮುದಾಯವರು ಸಹ ಅಭ್ಯರ್ಥಿಗಳ ಭವಿಷ್ಯ ನಿರ್ಧ ರಿಸುವಲ್ಲಿ ಪಾತ್ರ ವಹಿಸಲಿದ್ದಾರೆ. ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲು  ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಭಾರೀ ಪೈಪೋಟಿ ನಡೆದಿತ್ತು. ಜೆಡಿಎಸ್‌ನ ಬೆಂಗಳೂರು ನಗರ ಘಟಕ ಅಧ್ಯಕ್ಷ ಆರ್.ಪ್ರಕಾಶ್ ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದ ರು. ತಮಗೆ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸದಿಂದ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸಿದ್ದರು. ಈ ನಡು ವೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮೊಮ್ಮಗ ಪ್ರಜ್ವಲ್ ರೇವಣ್ಣ ಹೆಸರು ಬಲವಾಗಿ ಕೇಳಿಬಂತು.

ಬಿಜೆಪಿ ಟಿಕೆಟ್ ವಂಚಿತ ರಾಮಚಂದ್ರ ಅವರಿಗೆ ಮಣೆ ಹಾಕಲಾಯಿತು. ಶಾಸಕ ಮುನಿರತ್ನ ಅವರು ಕೊಳಚೆ ನಿರ್ಮೂಲನಾ ಮಂಡಳಿಯಿಂದ ಕೆಲವೊಂದು ಮನೆಗ ಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಇದು ಅವರಿಗೆ ವೋಟ್ ಬ್ಯಾಂಕ್. ಇದರ ಜತೆಗೆ ಕಾಂಗ್ರೆಸ್‌ಗೆ ಸಾಂಪ್ರದಾಯಿಕ ಮತಗಳು ಇವೆ. ಕ್ಷೇತ್ರದ ಪಾಲಿಕೆ ಮಹಿಳಾ ಸದಸ್ಯರೇ ಅವರ ವಿರುದ್ಧ ಇರುವ ಕಾರಣ ಗೆಲುವಿಗೆ ಬೇರೆಯದೇ ತಂತ್ರ ಅನುಸರಿಸಬೇಕಾಗುತ್ತದೆ. 

loader